Top 10 YouTubers: ಭಾರತದ ಟಾಪ್ 10 ಯೂಟ್ಯೂಬರ್‌ಗಳ ಗಳಿಕೆ ಎಷ್ಟು ಗೊತ್ತಾ..?
27 ವರ್ಷದ ಅಮಿತ್ ಭದಾನಾ ಅವರ ಹೆಸರಿನಲ್ಲಿಯೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 23.5 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭದಾನಾ ವಾರ್ಷಿಕವಾಗಿ ಸುಮಾರು 52 ಕೋಟಿ ರೂ.ವರೆಗೂ ಸಂಪಾದಿಸುತ್ತಾರಂತೆ.
BB Ki Vines ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಯಾಗಿರುವ ಭುವನ್ ಬಾಮ್ 20.8 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ವಾರ್ಷಿಕ 3 ಕೋಟಿ ರೂ. ಗಳಿಸುತ್ತಾರಂತೆ.
2 ಯೂಟ್ಯೂಬ್ ಚಾನೆಲ್ ಹೊಂದಿರುವ Ajey Nagar ಕ್ರಮವಾಗಿ 30.8 ಮಿಲಿಯನ್ ಮತ್ತು 9.3 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇವರು ಕೂಡ ವಾರ್ಷಿಕ ಕೋಟಿ ಕೋಟಿ ಲೆಕ್ಕದಲ್ಲಿ ಗಳಿಸುತ್ತಾರೆ.
ಪ್ರೇರಕ ಭಾಷಣಕಾರ ಡಾ.ವಿವೇಕ್ ಬಿಂದ್ರಾ ಅವರ ಯೂಟ್ಯೂಬ್ ಗಳಿಕೆ ವಾರ್ಷಿಕ 8 ಕೋಟಿ. ರೂ.ಗೂ ಅಧಿಕ ಎಂದು ವರದಿಯಾಗಿದೆ.
ಗೌರವ್ ಚೌಧರಿ ಯುಎಇಯಲ್ಲಿ ನೆಲೆಸಿರುವ 30 ವರ್ಷದ ಯೂಟ್ಯೂಬರ್. ಅವರು ಫೋರ್ಬ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಎರಡು ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ. Technical Guruji 21.6 ಮಿಲಿಯನ್ ಚಂದಾದಾರರು ಮತ್ತು ತಮ್ಮದೇ ಹೆಸರಿನ(Gaurav Chaudhary) ಯೂಟ್ಯೂಬ್ ಚಾನಲ್ 4.99 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇವರು ಕೂಡ ವಾರ್ಷಿಕವಾಗಿ ಕೋಟಿ ಕೋಟಿ ಗಳಿಸುತ್ತಾರಂತೆ.
25 ವರ್ಷದ ಹರ್ಷ ಬೆನಿವಾಲ್ ತಮ್ಮದೇ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ 13.4 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಅವರ ವಾರ್ಷಿಕವಾಗಿ ಸುಮಾರು 15-20 ಲಕ್ಷ ರೂ. ಗಳಿಸುತ್ತಾರಂತೆ.
ಮುಂಬೈ ಮೂಲದ ಪೂರ್ಣಕಾಲಿಕ ಯೂಟ್ಯೂಬರ್ ನಿಖಿಲ್ 3.83 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಅವರ ವಾರ್ಷಿಕ ಗಳಿಕೆ 3 ರಿಂದ 60 ಲಕ್ಷ ರೂ. ಎಂದು ಹೇಳಲಾಗಿದೆ.
ಬಾಣಸಿಗ(Chef)ರಾಗಿರುವ 59 ವರ್ಷದ ನಿಶಾ ಮಧುಲಿಕಾ ಭಾರತದ ಪ್ರಸಿದ್ಧ ಯೂಟ್ಯೂಬರ್. ಇವರ ‘ನಿಶಾ ಮಧುಲಿಕಾ’ ಹೆಸರಿನ ಚಾನಲ್‌ಗೆ 11.9 ಮಿಲಿಯನ್ ಚಂದಾದಾರರಿದ್ದಾರೆ. ಅವರು ವಾರ್ಷಿಕವಾಗಿ ಸುಮಾರು 75 ಲಕ್ಷ ರೂ. ಗಳಿಸುತ್ತಾರಂತೆ.
ಮೋಟಿವೇಶನಲ್ ವಿಡಿಯೋ ಮೂಲಕ ಖ್ಯಾತಿ ಗಳಿಸಿರುವ ಸಂದೀಪ್ ಮಹೇಶ್ವರಿ ಅವರ ಯೂಟ್ಯೂಬ್ ಚಾನೆಲ್ ಗೆ 21 ಮಿಲಿಯನ್ ಚಂದಾದಾರರಿದ್ದಾರೆ. ಅವರು ವಾರ್ಷಿಕವಾಗಿ 3 ಕೋಟಿ ರೂ. ಗಳಿಸುತ್ತಾರಂತೆ.
ವಿದ್ಯಾ ವೋಕ್ಸ್ ಯೂಟ್ಯೂಬ್ ಚಾನೆಲ್ ನಡೆಸುವ 30 ವರ್ಷದ ಚೆನ್ನೈ ಮೂಲದ ಗಾಯಕಿ ವಿದ್ಯಾ ಅಯ್ಯರ್ ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ವಿದ್ಯಾ 7.42 ಮಿಲಿಯನ್ ಸಬ್‌ಸ್ಕ್ರೈಬರ್ಸ್ ಹೊಂದಿದ್ದು, ವಾರ್ಷಿಕವಾಗಿ ಸುಮಾರು 74 ಲಕ್ಷ ರೂ. ಗಳಿಸುತ್ತಾರೆಂದು ತಿಳಿದುಬಂದಿದೆ.