ನವ ದಂಪತಿಗಳಿಗೆ ತಮಿಳುನಾಡಿನಲ್ಲಿರುವ ಟಾಪ್ 5 ಅತ್ಯುತ್ತಮ ಹನಿಮೂನ್ ತಾಣಗಳಿವು
ಪ್ರಾಚೀನ ಬೆಟ್ಟಗಳು, ಮಿನುಗುವ ಸರೋವರಗಳು, ಉದ್ದವಾದ ಕರಾವಳಿ, ಸುಂದರವಾದ ದೇವಾಲಯಗಳು, ಹಚ್ಚ ಹಸಿರಿನ ಭೂದೃಶ್ಯಗಳು, ವನ್ಯಜೀವಿ ಅಭಯಾರಣ್ಯಗಳು, ಶ್ರೀಮಂತ ಸಂಸ್ಕೃತಿ, ವರ್ಣರಂಜಿತ ಪದ್ಧತಿಗಳು ಮತ್ತು ಸಂಪ್ರದಾಯಗಳಿಂದ ಕೂಡಿರುವ ತಮಿಳುನಾಡು ನವ ದಂಪತಿಗಳಿಗೆ ಅತ್ಯುತ್ತಮ ರೋಮ್ಯಾಂಟಿಕ್ ತಾಣವೂ ಹೌದು. ತಮಿಳುನಾಡಿನಲ್ಲಿರುವ ಟಾಪ್ 5 ರೋಮ್ಯಾಂಟಿಕ್ ಹನಿಮೂನ್ ತಾಣಗಳು ಯಾವುವು ಎಂಬುದನ್ನು ಇಲ್ಲಿ ಪರಿಶೀಲಿಸಿ.
ಕೊಡೈಕೆನಾಲ್ ಪ್ರತಿಯೊಬ್ಬರೂ ಇಷ್ಟ ಪಡುವ ಸ್ಥಳ. ಇದು ದಕ್ಷಿಣ-ಭಾರತದ ಪ್ರಸಿದ್ಧ ಹನಿಮೂನ್ ತಾಣವೆಂದೇ ಹೆಸರುವಾಸಿ ಆಗಿದೆ. ನೀವು ತಮಿಳುನಾಡಿನಲ್ಲಿ ಹನಿಮೂನ್ ಯೋಜಿಸುತ್ತಿದ್ದರೆ, ನೀವು ಕೊಡೈಕೆನಾಲ್ಗೆ ಹೋಗಬಹುದು.
ಭಾರತದ ದಕ್ಷಿಣ ತುದಿ ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದ 'ಸಂಗಮದ' ಬಿಂದು, ಕನ್ಯಾಕುಮಾರಿ ತಮಿಳುನಾಡಿನ ಜನಪ್ರಿಯ ಹನಿಮೂನ್ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಸಂಸ್ಕೃತಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ಮೋಡಿಮಾಡುವ ನೋಟ ಮತ್ತು ಅದರ ಸುಂದರವಾದ ಕಡಲತೀರಗಳು ಎಂತಹವರನ್ನೇ ಆದರೂ ಮಂತ್ರಮುಗ್ಧಗೊಳಿಸುತ್ತದೆ.
ತಮಿಳುನಾಡಿನಲ್ಲಿ ಮಧುಚಂದ್ರಕ್ಕೆ ಕೂನೂರು ಕೂಡ ಅತ್ಯುತ್ತಮ ತಾಣವಾಗಿದೆ. ನೀಲಗಿರಿ ಗಿರಿಧಾಮಗಳನ್ನು ಒಳಗೊಂಡಿರುವ ಈ ಸ್ಥಳವನ್ನು ಅತ್ಯುತ್ತಮ ಮಧುಚಂದ್ರ ತಾಣ ಎಂದು ಪರಿಗಣಿಸಲಾಗಿದೆ. ನೀಲಗಿರಿ ಬೆಟ್ಟಗಳ ವಿಹಂಗಮ ನೋಟ ಮತ್ತು ಇಲ್ಲಿರುವ ಕ್ಯಾಥರೀನ್ ಜಲಪಾತ ಎಲ್ಲರ ಮನಸೂರೆಗೊಳ್ಳುತ್ತದೆ.
ತಮಿಳುನಾಡಿನ ಊಟಿ ಬಹುತೇಕ ಎಲ್ಲರಿಗೂ ತಿಳಿದಿರುವ ತಾಣ. ಊಟಿಯನ್ನು 'ಬೆಟ್ಟಗಳ ರಾಣಿ' ಎಂದೂ ಕರೆಯುತ್ತಾರೆ. ನವ ವಿವಾಹಿತರಿಗೆ ಅತ್ಯುತ್ತಮ ತಾಣ ಎಂದು ಗುರುತಿಸಿಕೊಂಡಿರುವ ಊಟಿ ಮಧುಚಂದ್ರಕ್ಕೆ ಸೂಕ್ತವಾದ ತಾಣವಾಗಿದೆ.
ಬೆಂಗಳೂರಿನಿಂದ ಸುಮಾರು 178 ಕಿಮೀ ದೂರದಲ್ಲಿರುವ ಯಳಗಿರಿ ಹಿಲ್ಸ್ ಮಧುಚಂದ್ರಕ್ಕೆ ಅತ್ಯಂತ ಸುಂದರವಾದ ತಾಣವಾಗಿದೆ.