Top 5 Best Mileage Bikes In India: ಮೈಲೇಜ್ ವಿಷಯದಲ್ಲಿ ಇಲ್ಲ ರಾಜಿ, ಇಲ್ಲಿವೆ ಟಾಪ್ 5 ಪವರ್ ಫುಲ್ ಬೈಕ್ಸ್
ಟಿವಿಎಸ್ ಸ್ಪೋರ್ಟ್ ತನ್ನ ಉತ್ತಮ ಲುಕ್ ನಿಂದಾಗಿ ಮಾತ್ರವಲ್ಲದೆ ಉತ್ತಮ ಮೈಲೇಜ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ಮೈಲೇಜ್ ವಿಭಾಗದಲ್ಲಿ ಅತ್ಯಂತ ಸೊಗಸಾದ ಬೈಕ್ ಆಗಿದೆ. ಈ ಬೈಕ್ 95 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಟಿವಿಎಸ್ ಸ್ಪೋರ್ಟ್‌ನ (TVS Sport) ಇಂಜಿನ್ 109.7 ಸಿಸಿ. ದೆಹಲಿಯಲ್ಲಿ ಟಿವಿಎಸ್ ಸ್ಪೋರ್ಟ್‌ನ ಎಕ್ಸ್ ಶೋರೂಂ ಬೆಲೆ ರೂ 57,330 ರಿಂದ ಆರಂಭವಾಗುತ್ತದೆ.
ಬಜಾಜ್‌ನ 2 ವೀಲರ್‌ಗಳಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಪ್ಲಾಟಿನಾ. ಈ 100CC ಎಂಜಿನ್ ಬೈಕ್ 8.6 Nm ಟಾರ್ಕ್ ಉತ್ಪಾದಿಸುತ್ತದೆ. ಬಜಾಜ್ ಪ್ಲಾಟಿನಾವನ್ನು (Bajaj Platina) ಡಿಟಿಎಸ್-ಐ ಟ್ವಿನ್ ಸ್ಪಾರ್ಕ್ ಎಂಜಿನ್ ನಿಂದ ನಿಯಂತ್ರಿಸಲಾಗುತ್ತದೆ, ಇದು ಉತ್ತಮ ಇಂಧನ ಮತ್ತು ಗಾಳಿಯ ಸಂಯೋಜನೆಯನ್ನು ಉತ್ಪಾದಿಸುತ್ತದೆ. ಒಂದು ಲೀಟರ್ ಪೆಟ್ರೋಲ್‌ನಲ್ಲಿ, ಈ ಬೈಕ್ 90 ಕಿಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ದೆಹಲಿಯ ಎಕ್ಸ್ ಶೋರೂಂನಲ್ಲಿ ಪ್ಲಾಟಿನಾ ಬೆಲೆ 56,480 ರೂ.
ಪ್ಲಾಟಿನಾ ಹೊರತಾಗಿ, ಬಜಾಜ್ CT 100 (Bajaj CT 100) ಕೂಡ ಮೈಲೇಜ್ ವಿಷಯದಲ್ಲಿ ಉತ್ತಮ ಆಯ್ಕೆಯಾಗಿದೆ. ಇದರ ವಿಶಿಷ್ಟ ಲಕ್ಷಣವೆಂದರೆ ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್. ಈ ಬೈಕಿನಲ್ಲಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ 99.27 ಸಿಸಿ ಎಂಜಿನ್ ಇದೆ. ಇದು 8.08 ಬಿಎಚ್‌ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ 89 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬಜಾಜ್ CT 100 ನ ಆರಂಭಿಕ ಬೆಲೆ 52,832 ರೂ. ಆಗಿದೆ.
ಇದನ್ನೂ ಓದಿ- ಒಂದು ಲಕ್ಷ ರೂ. ಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್ ಗಳಿವು
ಮೈಲೇಜ್ ವಿಷಯದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಈ 100CC ಎಂಜಿನ್ ಬೈಕ್ 8 bhp ಮತ್ತು 8Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 81kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಸ್ಪ್ಲೆಂಡರ್ ಪ್ಲಸ್‌ನ ಆರಂಭಿಕ ಬೆಲೆ 63,750 ರೂ.
ಇದನ್ನೂ ಓದಿ- ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಬಳಿ ಇವೆ ದುಬಾರಿ ಬೆಲೆಯ ಕಾರುಗಳು..!
ಹೀರೋ ಮೋಟೋಕಾರ್ಪ್‌ನಿಂದ ಹೀರೋ ಎಚ್‌ಎಫ್ ಡಿಲಕ್ಸ್ (Hero HF Deluxe) ಬೈಕ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಸಾಕಷ್ಟು ಪ್ರಸಿದ್ಧ ಬೈಕ್ ಆಗಿದೆ. ಈ ಬೈಕ್ 83 kmpl ಮೈಲೇಜ್ ನೀಡುತ್ತದೆ. ಇದರ ಕಡಿಮೆ ಬೆಲೆಯ ಜೊತೆಗೆ ಉತ್ತಮ ಮೈಲೇಜ್ ನಿಂದಾಗಿ ಇದು ಹೆಚ್ಚು ವಿಶೇಷವಾಗಿದೆ. ಇದು 97.2 ಸಿಸಿ ಎಂಜಿನ್ ಹೊಂದಿದೆ. ದೆಹಲಿಯಲ್ಲಿ Hero HF DELUXE ಬೆಲೆ 51,900 ರೂ. ರಿಂದ ಆರಂಭವಾಗುತ್ತದೆ.