Instagram Followers: ಇನ್’ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಸೆಲೆಬ್ರಿಟಿಗಳು: ಭಾರತೀಯರೂ ಇದ್ದಾರೆ!
ಇನ್’ಸ್ಟಾಗ್ರಾಂ ಮೊದಲು ಆರಂಭಿಸಿದ್ದು ಕೇವಲ ಫೋಟೋಗಳನ್ನು ಹಂಚಿಕೊಳ್ಳಲು. ಇದನ್ನು ಚಾಲ್ತಿಗೆ ತಂದಿದ್ದು 2010ರಲ್ಲಿ. ಈ ಅಪ್ಲಿಕೇಶನ್ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿತ್ತು.
2012 ರಲ್ಲಿ, Instagram ಅನ್ನು $1 ಬಿಲಿಯನ್’ಗೆ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿತು. ಇದು ಈಗ ಪ್ರಪಂಚದಾದ್ಯಂತದ ವಿವಿಧ ವ್ಯಕ್ತಿಗಳು ಬಳಸುವ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಸೈಟ್’ಗಳಲ್ಲಿ ಒಂದಾಗಿದೆ. ಇನ್’ಸ್ಟಾಗ್ರಾಮ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ ಐದು ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.
ಕ್ರಿಸ್ಟಿಯಾನೋ ರೊನಾಲ್ಡೊ: 567 ಮಿಲಿಯನ್ ಫಾಲೋವರ್ಸ್’ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ಕ್ರಿಸ್ಟಿಯಾನೋ ರೊನಾಲ್ಡೊ.
ಲಿಯೋನೆಲ್ ಮೆಸ್ಸಿ: ಅತ್ಯಂತ ಪ್ರಸಿದ್ಧ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಪ್ರಸ್ತುತ 447 ಮಿಲಿಯನ್ ಫಾಲೋವರ್ಸ್’ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಸೆಲೆನಾ ಗೊಮೆಜ್: ಈ ಪ್ರಸಿದ್ಧ ಪಾಪ್ ಸಿಂಗರ್ Instagram ನಲ್ಲಿ 405 ಮಿಲಿಯನ್ ಫಾಲೋವರ್ಸ್’ನ್ನು ಹೊಂದಿದ್ದಾರೆ. ಈ ಮೂಲಕ 400ರ ಗಡಿ ದಾಟಿದ ಮೊದಲ ಮಹಿಳೆಯಾಗಿದ್ದಾರೆ. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತು ವಿಡಿಯೋಗಳನ್ನು ಈಕೆ ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ.
ಕೈಲಿ ಜೆನ್ನರ್: ಪ್ರಸಿದ್ಧ ಅಮೇರಿಕನ್ ಮಾಡೆಲ್, ಸಮಾಜವಾದಿ ಮತ್ತು ಉದ್ಯಮಿ ಕೈಲಿ ಜೆನ್ನರ್ Instagram ನಲ್ಲಿ 384 ಮಿಲಿಯನ್ ಫಾಲೋವರ್ಸ್’ಗಳನ್ನು ಹೊಂದಿದ್ದಾರೆ.
ಡ್ವೇನ್ "ದಿ ರಾಕ್" ಜಾನ್ಸನ್: ಮಾಜಿ WWE ಚಾಂಪಿಯನ್ ಮತ್ತು ಹಾಲಿವುಡ್ ಚಲನಚಿತ್ರ ತಾರೆ ಡ್ವೇನ್ ಜಾನ್ಸನ್ ಅವರು 371 ಮಿಲಿಯನ್ ಫಾಲೋವರ್ಸ್’ಗಳನ್ನು Instagram ನಲ್ಲಿ ಹೊಂದಿದ್ದಾರೆ. ಅಗ್ರ ಐದು ಪ್ರಸಿದ್ಧ ವ್ಯಕ್ತಿಗಳಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಹಳ ಹಿಂದಿನಿಂದಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಯಾಗಿದ್ದಾರೆ. 242 ಫಾಲೋರ್ವಸ್ ಹೊಂದಿರುವ ಇವರು ಮೊದಲ ಸ್ಥಾನದಲ್ಲಿದ್ದಾರೆ.
ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮತ್ತು ಬಾಲಿವುಡ್ ಎರಡರಲ್ಲೂ ಬಹಳ ಸಮಯದಿಂದ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 85.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.