ಬಿಡುಗಡೆಯಾಯಿತು Top 5 Electric Scooters, ಇವುಗಳಲ್ಲಿ ಯಾವುದು ಬೆಸ್ಫ್ ನೋಡಿ
ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳನ್ನು ಆಗಸ್ಟ್ 15 ರಂದು ಬಹಿರಂಗಪಡಿಸಿದೆ. ಬೆಂಗಳೂರು ಮೂಲದ ಇವಿ ಸ್ಟಾರ್ಟಪ್ ಸಿಂಪಲ್ ಎನರ್ಜಿ ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡಾ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಓಲಾ ಎಲೆಕ್ಟ್ರಿಕ್ ತನ್ನ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ.
ಬೆಂಗಳೂರು ಮೂಲದ ಇವಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.10 ಲಕ್ಷ ರೂಗಳು. ಈ ಬೆಲೆಯಲ್ಲಿ, ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಗಿಂತ ಸ್ವಲ್ಪ ದುಬಾರಿಯಾಗಿದೆ. ಕಂಪನಿಯು 1,947 ರೂ.ಗಳ ಟೋಕನ್ ಮೊತ್ತಕ್ಕೆ ಸ್ಕೂಟರ್ ಬುಕಿಂಗ್ ಆರಂಭಿಸಿದೆ.
ಬಜಾಜ್ ಚೇತಕ್ ಅತ್ಯಂತ ದುಬಾರಿ ವಾಹನಗಳಲ್ಲಿ ಒಂದಾಗಿದೆ. ಇದನ್ನು ಭಾರತದಲ್ಲಿ 1,25,817ರೂಪಾಯಿ ಆರಂಭಿಕ ಬೆಲೆಗೆ ಖರೀದಿಸಬಹುದು. ಇದು 2 ವೆರಿಯೆಂಟ್‌ಗಳು ಮತ್ತು 6 ಬಣ್ಣಗಳಲ್ಲಿ ಲಭ್ಯವಿದೆ. ಟಾಪ್ ವೆರಿಯಂಟ್‌ನ ಬೆಲೆ ರೂ 1,27,916 ಯಿಂದ ಆರಂಭವಾಗುತ್ತದೆ.
ಟಿವಿಎಸ್ ಮೋಟಾರ್ ಕಂಪನಿ- iQube ನ ಎಲೆಕ್ಟ್ರಿಕ್ ಬೆಲೆ 100,777 ರೂ.ಗಳಾಗಿವೆ.
ಅಥರ್ ಎನರ್ಜಿಯ 450 ಪ್ಲಸ್ ಮತ್ತು 450X ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕ್ರಮವಾಗಿ 1.13 ರೂ ಲಕ್ಷ ಮತ್ತು 1.32 ಲಕ್ಷರೂ. ಗಳಾಗಿವೆ.