25 ಸಾವಿರಕ್ಕಿಂತ ಕಡಿಮೆ ಬೆಲೆಯ ಟಾಪ್ 5 ಲ್ಯಾಪ್‌ಟಾಪ್‌ಗಳು: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯಗಳು
Lenovoನ Chromebook ಮಿಲಿಟರಿ ದರ್ಜೆಯ ಪ್ರಮಾಣೀಕರಣ(Military Grade Certification)ದೊಂದಿಗೆ ಬರುತ್ತದೆ. ಇದು ನೀರು ನಿರೋಧಕ(Water-Resistant) ಕೀಬೋರ್ಡ್ ಅನ್ನು ಹೊಂದಿದೆ. Lenovo Chromebook 14e 14 ಇಂಚಿನ FHD ಡಿಸ್ಪ್ಲೇಯನ್ನು ಹೊಂದಿದ್ದು, 4GB RAM ಮತ್ತು 64GB ಆಂತರಿಕ ಸ್ಟೋರೇಜ್ ನೀಡುತ್ತದೆ. ಈ ಸಾಧನವು G-Suite integrationದೊಂದಿಗೆ ಬರುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಭರವಸೆ ನೀಡುತ್ತದೆ. Lenovo Chromebook 14e ಬೆಲೆ 24,990 ರೂ. ಇದೆ.
Asus Chromebook Flip 360-ಡಿಗ್ರಿ ಕನ್ವರ್ಟಿಬಲ್ ಟಚ್-ಸ್ಕ್ರೀನ್ Displayದೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ ಮಿಲಿಟರಿ ದರ್ಜೆಯ ಬಾಳಿಕೆ ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಜೊತೆ ಜೋಡಿಸಲಾದ ಇಂಟೆಲ್ ಸೆಲೆರಾನ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಸಾಧನವು Chrome OS ನಲ್ಲಿ ರನ್ ಆಗುತ್ತದೆ ಮತ್ತು 10 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಭರವಸೆ ನೀಡುತ್ತದೆ. Asus Chromebook Flip ಬೆಲೆ 24,999 ರೂ. ಇದೆ.
HPಯ Chromebook MediaTek ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ChromeOS ನಲ್ಲಿ ರನ್ ಆಗುತ್ತದೆ. ಈ ಲ್ಯಾಪ್‌ಟಾಪ್ 11.6-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು 4GB RAM ಮತ್ತು 64GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ನಯವಾದ ಮತ್ತು ಸ್ಲಿಮ್ ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ 12 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. Google ಸಹಾಯಕ ಬೆಂಬಲದೊಂದಿಗೆ ಬರುವ ಈ HP Chromebook MediaTek MT8183 ಬೆಲೆ 23,490 ರೂ. ಆಗಿದೆ.
Chromebook C223 ಹಗುರವಾದ ಲ್ಯಾಪ್‌ಟಾಪ್ ಆಗಿದ್ದು, ಇದು ಕೇವಲ 1kg ಗಿಂತ ಕಡಿಮೆಯಿರುತ್ತದೆ. ಇದು 11.6-ಇಂಚಿನ ಡಿಸ್ಪ್ಲೇ ಹೊಂದಿರುವ ಅತ್ಯಂತ ತೆಳುವಾದ ಲ್ಯಾಪ್‌ಟಾಪ್ ಎಂದು ಆಸುಸ್ ಹೇಳಿಕೊಂಡಿದೆ. ಸಾಧನವು Chrome OS ನಲ್ಲಿ ರನ್ ಆಗುತ್ತದೆ ಮತ್ತು 4GB RAM ಮತ್ತು 32GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ ಇಂಟೆಲ್ ಡ್ಯುಯಲ್-ಕೋರ್ ಸೆಲೆರಾನ್ N3350 ಪ್ರೊಸೆಸರ್‌ನಿಂದ ಚಾಲಿತವಾಗಿದೆ. Asus Chromebook C223 ಬೆಲೆ 23,966 ರೂ. ಇದೆ.
ಈ ಕೈಗೆಟುಕುವ ಲ್ಯಾಪ್‌ಟಾಪ್ 4GB RAM ಮತ್ತು 32GB ಆಂತರಿಕ ಸ್ಟೋರೇಜ್ ಹೊಂದಿದೆ. ಇದು 11.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಗ್ರಾಫಿಕ್ಸ್ ಅನ್ನು ಇಂಟೆಲ್ UHD ಗ್ರಾಫಿಕ್ಸ್ 600 ನಿರ್ವಹಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಈ ಲ್ಯಾಪ್‌ಟಾಪ್ 12.5 ಗಂಟೆಗಳ ಬ್ಯಾಟರಿ ಅವಧಿಯ ಭರವಸೆ ನೀಡುತ್ತದೆ. Acer Chromebook 311 C733-C5A ಬೆಲೆ 23,990 ರೂ. ಇದೆ.