ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಟಾಪ್ 5 ಮಾರ್ನಿಂಗ್ ಡ್ರಿಂಕ್ಸ್
ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನೈಸರ್ಗಿಕವಾಗಿ ತೂಕ ತಿಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಮ್ಯಾಜಿಕ್ ಡ್ರಿಂಕ್ಸ್ ಆಗಿ ಕಾರ್ಯನಿರ್ವಹಿಸುವ ಈ ಐದು ಪಾನೀಯಗಳನ್ನು ನೀವೂ ಒಮ್ಮೆ ಟ್ರೈ ಮಾಡಿ.
ಲೆಮೆನ್ ವಾಟರ್ ಕಡಿಮೆ ಕ್ಯಾಲೋರಿ ಪಾನೀಯವಾಗಿದ್ದು, ಇದು ಜೀರ್ಣಕ್ರಿಯೆಗೆ ತುಮಾ ಸಹಾಯಕವಾಗಿದೆ. ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ಈ ಪಾನೀಯವನ್ನು ಕುಡಿಯುವುದರಿಂದ ಚಯಾಪಚಯ ಹೆಚ್ಚಾಗುತ್ತದೆ.
ಉತ್ಕರ್ಷಣ ನಿರೋಧಕಗಳು ಮತ್ತು ಚಯಾಪಚಯವನ್ನು ಉತ್ತೇಜಿಸುವ ಕ್ಯಾಟೆಚಿನ್ ಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಪ್ರತಿ ದಿನ ಮುಂಜಾನೆ ಉಪಾಹಾರಕ್ಕೂ ಒಂದು ಗಂಟೆ ಮೊದಲು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಮೊಸರು, ಪಾಲಕ್, ಕಾಲೋಚಿತ ಹಣ್ಣನ್ನು ಮಿಶ್ರಣ ಮಾಡಿ ಸ್ಮೂಥಿ ತಯಾರಿಸಿ ಸೇವಿಸುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿರುವ ಶುಂಠಿ ಮತ್ತು ಅರಿಶಿನ ಮಿಶ್ರಿತ ಚಹಾವನ್ನು ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನೈಸರ್ಗಿಕವಾಗಿ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.