Building Demolitions : ಈ ಅವಳಿ ಗೋಪುರಕ್ಕಿಂತ ಮೊದಲು ನೆಲಕ್ಕುರುಳಿದ ವಿಶ್ವದ ಬೃಹತ್ ಕಟ್ಟಡಗಳು ಇಲ್ಲಿವೆ!

Sun, 28 Aug 2022-7:46 pm,

ಚಿಕಾಗೋದಲ್ಲಿ 1925 ರಲ್ಲಿ ನಿರ್ಮಿಸಲಾದ 160 ಮೀಟರ್ ಎತ್ತರದ ಮಾರಿಸನ್ ಹೋಟೆಲ್ ಅನ್ನು ಕೂಡ ನೆಲಸಮ ಮಾಡಲಾಗಿದೆ. ಈ ಕಟ್ಟಡವು 45 ಮಹಡಿಗಳನ್ನು ಹೊಂದಿತ್ತು. ಆದರೆ ಅದರ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು 1965 ರಲ್ಲಿ ಅದನ್ನು ಕೆಡವಲಾಯಿತು. ಸಧ್ಯ ಬ್ಯಾಂಕ್ ಒನ್ ಪ್ಲಾಜಾವನ್ನು ಅದರ ಸ್ಥಳದಲ್ಲಿ ನಿರ್ಮಿಸಲಾಗಿದೆ.

ಭಾರತದ ಸೂಪರ್‌ಟೆಕ್ ಟ್ವಿನ್ ಟವರ್ ಕೂಡ ಈಗ ಈ ಪಟ್ಟಿಗೆ ಸೇರಿಕೊಂಡಿದೆ. 32 ಮತ್ತು 31 ಮಹಡಿಗಳನ್ನು ಹೊಂದಿರುವ ಈ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಅದನ್ನು ಕೆಡವುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಗೋಪುರ ಕೆಡವಿದ ನಂತರ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು.

234 ಮೀಟರ್ ಎತ್ತರದ AXA ಟವರ್ ನೆಲಸಮಗೊಂಡ ವಿಶ್ವದ ಅತಿ ಎತ್ತರದ ಕಟ್ಟಡವಾಗಿದೆ. AXA ಟವರ್ ಕೆಡವಿ 305 ಮೀಟರ್ ಎತ್ತರದ ಕಟ್ಟಡಕ್ಕೆ ದಾರಿ ಮಾಡಿಕೊಡಲಾಯಿತು. ಈ ಕಟ್ಟಡವನ್ನು ಟೆಕ್ ದೈತ್ಯ ಅಲಿಬಾಬಾ ಇತರ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಅಬುಧಾಬಿಯ ಮಿನಾ ಪ್ಲಾಜಾ 2014 ರಲ್ಲಿ ಪೂರ್ಣಗೊಂಡಿತು. ಅದರ ಎತ್ತರ 168.5 ಮೀಟರ್. ಈ ಕಟ್ಟಡವನ್ನು 2020 ರಲ್ಲಿ ಕೆಡವಲಾಯಿತು. ಮೀನಾ ಪ್ಲಾಜಾವನ್ನು ಕೆಡವಲು ಸ್ಫೋಟ ತಂತ್ರವನ್ನು ಬಳಸಲಾಯಿತು.

ನ್ಯೂಯಾರ್ಕ್‌ನ ಜೆಪಿ ಮೋರ್ಗಾನ್ ಚೇಸ್ ಟವರ್ ಅನ್ನು 270 ಪಾರ್ಕ್ ಅವೆನ್ಯೂ ಎಂದೂ ಕರೆಯಲಾಗುತ್ತದೆ. ಈ ಕಟ್ಟಡವು 205 ಮೀಟರ್ ಎತ್ತರದಲ್ಲಿದೆ ಮತ್ತು ಇದನ್ನು 2021 ರಲ್ಲಿ ಕೆಡವಲಾಯಿತು. ಬದಲಾಗಿ 423 ಮೀಟರ್ ಎತ್ತರದ ಕಟ್ಟಡ ನಿರ್ಮಿಸಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link