ವಯಸ್ಸಾಗದ ಮೇಲೆಯೂ ನ್ಯಾಚುರಲ್ ಬ್ಯೂಟಿಫುಲ್ ಆಗಿ ಕಾಣಲು ಪ್ರತಿದಿನ ಈ ಜ್ಯೂಸ್ ಕುಡಿಯಿರಿ..!
ಕೆಲವು ಜನರು ಎಷ್ಟೇ ವಯಸ್ಸಾದವರಾಗಿದ್ದರೂ ಅವರು ವಯಸ್ಸಾದವರಂತೆ ಕಾಣಲ್ಲ.. ಅದಕ್ಕೆ ಕಾರಣ ಅವರ ಕಾಂತಿಯುತ ಚರ್ಮ. ಅವರು ತಮ್ಮ ಚರ್ಮದ ಮೇಲೆ ಪರಿಣಾಮ ಬೀರದಂತೆ ಕಾಳಜಿವಹಿಸಿರುತ್ತಾರೆ. ವಯಸ್ಸಾದಂತೆ ಸುಕ್ಕುಗಳನ್ನು ತಪ್ಪಿಸಲು ಚರ್ಮದ ಆರೈಕೆಗೆ ವಿಶೇಷ ಕಾಳಜಿಯ ಅಗತ್ಯವಿದೆ.
ಚರ್ಮದ ಮೇಲೆ ವಯಸ್ಸಿನ ಪರಿಣಾಮಗಳನ್ನು ತಡೆಗಟ್ಟಲು ನಿಯಮಿತವಾಗಿ ಹಾಲು ಕುಡಿಯಿರಿ. ಹಾಲಿನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಆದರೆ ಲ್ಯಾಕ್ಟೋಸ್ ಅಲರ್ಜಿ ಇರುವವರು ಹಾಲಿನ ಬದಲಿಗೆ ಸೋಯಾ ಹಾಲನ್ನು ನಿಯಮಿತವಾಗಿ ಕುಡಿಯಬಹುದು. ಇದರಿಂದ ಚರ್ಮದ ಮೇಲೆ ಸುಕ್ಕುಗಳು ಉಂಟಾಗುವುದಿಲ್ಲ.
ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ ಒಂದು ಕಪ್ ಗ್ರೀನ್ ಟೀ ಕುಡಿಯಿರಿ. ಹಸಿರು ಚಹಾವು ದೇಹದಿಂದ ಹೆಚ್ಚುವರಿ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಚರ್ಮದ ಮೇಲೆ ಯಾವುದೇ ಒತ್ತಡ ಬೀರುವುದಿಲ್ಲ. ಇದು ತ್ವಚೆಯನ್ನು ತಾಜಾವಾಗಿರಿಸುತ್ತದೆ.
ಬೆಳಗ್ಗೆ ಎದ್ದು ಒಂದು ಕಪ್ ಕಾಫಿ ಕುಡಿದರೆ ದೇಹ ಉಲ್ಲಾಸದಿಂದ ಕೂಡಿರುತ್ತದೆ. ಕಾಫಿ ಚರ್ಮಕ್ಕೂ ಒಳ್ಳೆಯದು. ಚರ್ಮದ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಈ ಪಾನೀಯವು ತುಂಬಾ ಸಹಾಯಕವಾಗಿದೆ. ಆದರೆ ನೀವು ಹೆಚ್ಚು ಕೆಫೀನ್ ಸೇವಿಸಿದರೆ ಅದು ಅಡ್ಡ ಪರಿಣಾಮ ಬೀರಬಹುದು..
ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಕ್ಯಾರೆಟ್ ತುಂಬಾ ಸಹಕಾರಿ. ಕ್ಯಾರೆಟ್ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದು ಚರ್ಮಕ್ಕೆ ಒಳ್ಳೆಯದು ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ಅಲ್ಲದೆ, ಬೀಟ್ರೂಟ್ ನೈಸರ್ಗಿಕ ನೈಟ್ರೇಟ್ಗಳನ್ನು ಹೊಂದಿದ್ದು, ಇದು ಉತ್ತಮ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಉತ್ತಮವಾಗಿದ್ರೆ, ಚರ್ಮ ಫ್ರೇಶ್ ಇರುತ್ತದೆ.
ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ರಸ ಮತ್ತು ಜೇನುತುಪ್ಪವನ್ನು ಕುಡಿಯುವುದರಿಂದ ಬೊಜ್ಜು ತಡೆಯಬಹುದು. ಇದಲ್ಲದೆ, ಈ ಪಾನೀಯವು ದೇಹದಿಂದ ಹೆಚ್ಚುವರಿ ಕಲ್ಮಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಪ್ರತಿದಿನ ಒಂದು ಲೋಟ ಮಜ್ಜಿಗೆಯನ್ನು ಸೇವಿಸುವುದರಿಂದ ಹೊಟ್ಟೆಯು ತಂಪಾಗಿರುತ್ತದೆ ಮತ್ತು ಚರ್ಮದ ಹೊಳಪನ್ನು ಪುನಃಸ್ಥಾಪಿಸುತ್ತದೆ.