Top Scooters: ನೋಡುತ್ತಲೇ ಮನಸೂರೆಗೊಳ್ಳುವ 125 ಸಿಸಿ ಎಂಜಿನ್ ಸಾಮರ್ಥ್ಯದ ಟಾಪ್ ಸ್ಕೂಟರ್ ಗಳಿವು

Tue, 22 Nov 2022-8:35 pm,

1. ಹೋಂಡಾ ಆಕ್ಟಿವಾ 123.9cc ಇಂಧನ ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ. ಇದು 8.29PS ಪವರ್ ಮತ್ತು 10.3Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೈಲೆಂಟ್ ಸ್ಟಾರ್ಟಿಂಗ್ ಆಪರೇಶನ್ ಗಾಗಿ ಇದು ACG ಸ್ಟಾರ್ಟರ್ ಜನರೇಟರ್ ಅನ್ನು ಹೊಂದಿದೆ. ಇದರಲ್ಲಿ ಸ್ಟಾರ್ಟ್-ಸ್ಟಾಪ್ ವ್ಯವಸ್ಥೆಯೂ ಲಭ್ಯವಿದೆ. ಹೋಂಡಾ ಆಕ್ಟಿವಾ 125 ಬೆಲೆ ರೂ.74,898 ರಿಂದ ಆರಂಭಗೊಳ್ಳುತ್ತದೆ.  

2. TVS ಜುಪಿಟರ್ 125, 124.8cc ಸಿಂಗಲ್-ಸಿಲಿಂಡರ್, ಎರಡು-ವಾಲ್ವ್ ಎಂಜಿನ್ ಅನ್ನು ಹೊಂದಿದೆ, ಇದು 6000rpm ನಲ್ಲಿ 8.3PS ಪವರ್ ಮತ್ತು 4500rpm ನಲ್ಲಿ 10.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೆಲೆ ರೂ.81,275 ರಿಂದ ಆರಂಭವಾಗುತ್ತದೆ.  

3. TVS Ntorq 124.8cc ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 9.38PS ಪವರ್ ಮತ್ತು 10.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ರೇಸ್ XP ರೂಪಾಂತರವು 10.2PS ಮತ್ತು 10.8Nm ಅನ್ನು ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆ ರೂ.79956 ರಿಂದ ಆರಂಭವಾಗುತ್ತದೆ.  

4. ಸುಜುಕಿ ಬರ್ಗ್‌ಮ್ಯಾನ್ ಬೆಲೆ ರೂ.82,700 ರಿಂದ ಆರಂಭವಾಗುತ್ತದೆ. ಇದು 124cc, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆಯುತ್ತದೆ. ಇದು BS6 ಎಂಜಿನ್. ಇದು 8.7PS ಗರಿಷ್ಠ ಶಕ್ತಿ ಮತ್ತು 10Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.  

5. ಸುಜುಕಿ ಆಕ್ಸೆಸ್ 124cc ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು BS6 ಎಂಜಿನ್. ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 8.7PS ಪವರ್ ಮತ್ತು 10Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುಜುಕಿ ಆಕ್ಸೆಸ್‌ನ ಆರಂಭಿಕ ಬೆಲೆ 77,600 ರೂ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link