ಶ್ವಾಸಕೋಶದ ಆರೋಗ್ಯಕ್ಕಾಗಿ ಐದು ಅತ್ಯುತ್ತಮ ಆಹಾರಗಳಿವು
ದೇಹದ ಪ್ರಮುಖ ಅಂಗಗಳಲ್ಲಿ ಶಾಸಕೋಶವೂ ಒಂದು. ವಾಯುಮಾಲಿನ್ಯ, ಧೂಮಪಾನದಿಂದಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯು ಮಾಲಿನ್ಯದಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 4.2 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ, ನಿಮ್ಮ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ನಿಮ್ಮ ಶ್ವಾಸಕೋಶವನ್ನು ಹಾನಿಕಾರಕ ಮಾಲಿನ್ಯದಿಂದ ರಕ್ಷಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಂತಹ ಐದು ಪ್ರಮುಖ ಆಹಾರಗಳು ಯಾವುವು ಎಂದು ತಿಳಿಯೋಣ...
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ, ಶ್ವಾಸಕೋಶದ ಆರೋಗ್ಯಕ್ಕೂ ಇದನ್ನು ಅತ್ಯುತ್ತಮ ಪಾನೀಯ ಎಂದು ಹೇಳಲಾಗುತ್ತದೆ. ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದ್ದು ಇದು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ.
ಶ್ವಾಸಕೋಶಕ್ಕೆ ಮತ್ತೊಂದು ಸೂಪರ್‌ಫುಡ್ ಎಂದರೆ ಡ್ರೈ ಫ್ರೂಟ್ಸ್. ಬಾದಾಮಿ, ಗೋಡಂಬಿ, ವಾಲ್‌ನಟ್ಸ್, ಪಿಸ್ತಾದಂತಹ ಒಣ ಹಣ್ಣುಗಳ ಸೇವನೆಯಿಂದಲೂ ಶ್ವಾಸಕೋಶವನ್ನು ಆರೋಗ್ಯವಾಗಿರಿಸಬಹುದು.
ಬ್ರೊಕೊಲಿಯು ಸಲ್ಫೊರಾಫೇನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಹಾಗಾಗಿ, ಬ್ರೊಕೊಲಿ ಸೇವನೆಯಿಂದ ಶ್ವಾಸಕೋಶದ ಜೀವಕೋಶಗಳಲ್ಲಿ ಕಂಡುಬರುವ ಜೀನ್‌ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದು ಆಸ್ತಮಾದಲ್ಲಿ ಶ್ವಾಸಕೋಶದಲ್ಲಿ ಗಾಳಿಯ ಹರಿವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ಶುಂಠಿ ಉರಿಯೂತ ನಿವಾರಕವಾಗಿದ್ದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ವಾರದಲ್ಲಿ ಎರಡು ಬಾರಿ ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಶೇ. 44 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.