Top Selling Cars in Pakistan: ಪಾಕಿಸ್ತಾನದಲ್ಲಿ ಮಾರಾಟವಾಗುವ ಟಾಪ್ 5 ಕಾರುಗಳಲ್ಲಿ ಮೂರು ಭಾರತೀಯ ಕಾರುಗಳು
ಭಾರತದ ಬಗ್ಗೆ ಕುರುಡು ದ್ವೇಷ ಭಾವವನ್ನು ಹೊಂದಿರುವ ಪಾಕಿಸ್ತಾನದ ಜನರಿಗೆ ಭಾರತೀಯ ವಾಹನಗಳ ಬಗೆಗಿನ ವ್ಯಾಮೋಹ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು. ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಟಾಪ್ 5 ಕಾರುಗಳಲ್ಲಿ ಮೂರು ಕಾರುಗಳು ಭಾರತೀಯ ಕಾರುಗಳು. ಮಾರುತಿ ಸುಜುಕಿಯ ಆಲ್ಟೊ ಕಾರಿಗೆ ಪಾಕಿಸ್ತಾನದಲ್ಲಿ ತುಂಬಾ ಬೇಡಿಕೆ ಇದೆ.
ಮಾರುತಿ ಸುಜುಕಿಯ ಆಲ್ಟೋ ಮಾತ್ರವಲ್ಲದೆ, ಮಾರುತಿ ಸುಜುಕಿಯ ಸ್ವಿಫ್ಟ್ ಕೂಡ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಪಾಕಿಸ್ತಾನದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಹೇಳಲಾಗುತ್ತದೆ.
ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮಾರುತಿ ಸುಜುಕಿಯ ಕಾರ್ ಬೋಲನ್ ಅಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಕಾರ್ ಭಾರತದಲ್ಲಿ ಮಾರಾಟವಾಗುವ ಒಮಿನಿಯ ಹೊಸ ವಿನ್ಯಾಸಎಂತಲೇ ಹೇಳಬಹುದು.
ಟೊಯೊಟಾದ ಸೆಡಾನ್ ಕೊರೊಲ್ಲಾ ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಅತಿ ಬೇಡಿಕೆಯ ಕಾರುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎಲೈಟ್ ವರ್ಗದ ಪಾಕಿಸ್ತಾನಿಗಳು ಈ ಕಾರನ್ನು ಹೊಂದಲು ಬಯಸುತ್ತಾರೆ.
ಐಷಾರಾಮಿ ಕಾರುಗಳನ್ನು ಇಷ್ಟಪಡುವ ಪಾಕಿಸ್ತಾನಿಗಳಿಗೂ ಕೂಡ ಹೋಂಡಾ ಸಿಟಿ ಕಾರೆಂದರೆ ಬಲು ಪ್ರಿಯ. ಈ ಕಾರಿನ 6 ಮಾದರಿಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ.