Top Selling SUV: ಎಲ್ಲಕ್ಕಿಂತ ಹೆಚ್ಚು ಮಾರಾಟಗೊಳ್ಳುವ SUV ಇದು, ಬೆಲೆ ಕೇವಲ ಇಷ್ಟೇ!
1. ಇತ್ತೀಚೆಗಷ್ಟೇ, ಟಾಟಾ ನೆಕ್ಸಾನ್ ಬೆಲೆಯನ್ನು ಹೆಚ್ಚಿಸಲಾಗಿದೆ, ಈ ಬೆಲೆ ಏರಿಕೆಯ ನಂತರ ಅದರ ಬೆಲೆ ಶ್ರೇಣಿಯು 7.70 ಲಕ್ಷದಿಂದ 14.18 ಲಕ್ಷದವರೆಗೆ ತಲುಪಿತು (ಎಕ್ಸ್ ಶೋ ರೂಂ, ದೆಹಲಿ). ಈ ಕಾರಿನ ಬೆಲೆಯನ್ನು ರೂ 18,000 ವರೆಗೆ ಹೆಚ್ಚಿಸಲಾಗಿದೆ (ವೇರಿಯಂಟ್ ಆಧರಿಸಿ).
2. ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳಲ್ಲಿ ಬರುತ್ತದೆ. ಇದು 1.2-ಲೀಟರ್, 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ (110PS/170NM) ಮತ್ತು 1.5-ಲೀಟರ್, 4-ಸಿಲಿಂಡರ್ ಡೀಸೆಲ್ ಎಂಜಿನ್ (110PS/260NM) ಆಯ್ಕೆಯನ್ನು ಹೊಂದಿದೆ.
3. ಇದು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊನಿದೆ. ARAI ಪ್ರಕಾರ ಟಾಟಾ ನೆಕ್ಸಾನ್ (ಡೀಸೆಲ್) 21.5 kmpl ಮೈಲೇಜ್ ನೀಡುತ್ತದೆ ಮತ್ತು Tata Nexon (ಪೆಟ್ರೋಲ್) 17.2 kmpl ಮೈಲೇಜ್ ನೀಡುತ್ತದೆ ಎನ್ನಲಾಗಿದೆ.
4. ಇದು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ), ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಹಿಂದಿನ ಎಸಿ ವೆಂಟ್‌ಗಳು, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
5. ಇದು ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಇದು ಸಾಕಷ್ಟು ಮುಂಚೂಣಿಯಲ್ಲಿದೆ. ಗ್ಲೋಬಲ್ NCAP ಇದಕ್ಕೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಮಾರುಕಟ್ಟೆಯಲ್ಲಿ, ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂನಂತಹ ಕಾರುಗಳೊಂದಿಗೆ ಪೈಪೋಟಿ ನಡೆಸುತ್ತದೆ.