2025ರಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಟಾಪ್ ಸೌತ್ ಸಿನಿಮಾಗಳಿವು..! ಇವುಗಳಲ್ಲಿ ಕನ್ನಡ ಚಿತ್ರಗಳೇ ಹೆಚ್ಚು..

Fri, 06 Dec 2024-7:00 pm,

Thandel movie : ʼತಾಂಡೇಲ್‌ʼ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಆಕ್ಷನ್ ಡ್ರಾಮಾ ಸಿನಿಮಾ. ಚಂದು ಮೊಂಡೇಟಿ ನಿರ್ದೇಶನದ, ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂತರಾಷ್ಟ್ರೀಯ ಕಡಲ ಗಡಿಯ ನೀರಿನಲ್ಲಿ ಮೀನು ಹಿಡಿಯಲು ಹೋಗಿ ಪಾಕಿಸ್ತಾನಿ ಸೈನಿಕ ಪಡೆಗಳಿಗೆ ಸಿಕ್ಕಿಬಿದ್ದ ಮೀನುಗಾರನ ಕಥೆಯೇ ತಾಂಡೇಲ್‌. ಈ ಚಿತ್ರವು ಫೆಬ್ರವರಿ 7, 2025 ರಂದು ಬಿಡುಗಡೆಯಾಗಲಿದೆ.  

KD the Devil : 'ಕೆಡಿ ದಿ ಡೆವಿಲ್' ಚಿತ್ರ 2025 ರಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆಕ್ಷನ್‌ ಪ್ರೀನ್ಸ್‌ ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕುಂದ್ರಾ, ನೋರಾ ಫತೇಹಿ ಮುಂತಾದವರ ನಟಿಸಿದ್ದಾರೆ.   

Kantara 2 : ಕಾಂತಾರ 2 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಕಾಂತಾರ ಮೊದಲ ಭಾಗ ಹಿಟ್‌ ಆದ ನಂತರ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ.  

Toxic Movie : ಕೆಜಿಎಫ್‌ ಹಿಟ್‌ ಸಕ್ಸಸ್‌ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಈ ಚಿತ್ರ ಏಪ್ರೀಲ್‌ 10 2025 ರಂದು ಬಿಡುಗಡೆಯಾಗಲಿದೆ. ಗೀತು ಮೋಹನ್‌ ದಾಸ್‌ ನಿರ್ದೇಶನದ ಟಾಕ್ಸಿಕ್‌ ಸಿನಿಮಾ.  

UI Movie : ಹೊಸ ಬಗೆಯ ಸಿನಿಮಾಗಳ ಮೂಲಕ ವಿಶೇಷ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿರುವ ಉಪೇಂದ್ರ ಈ ಬಾರಿ ‘ಯುಐ ದಿ ಮೂವಿ’ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರೇ ಬರೆದು ನಿರ್ದೇಶಿಸಿರುವ ಈ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬರಲಿದೆ.  

Goodachari 2 : ಅಡಿವಿ ಶೇಶ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಗೂಢಚಾರಿ 2 2025 ರಲ್ಲಿ ಬಿಡುಗಡೆಯಾಗಲಿದೆ. ಇದು 2018 ರ ಹಿಟ್ ಚಲನಚಿತ್ರ ಗೂಢಚಾರಿಯ ಮುಂದುವರಿದ ಭಾಗವಾಗಿದೆ. ವಿನಯ್ ಕುಮಾರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಭಾರೀ ನಿರೀಕ್ಷೆಗಳನ್ನು ಹೊಂದಿದೆ.  

Akhanda 2 : ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬಂದ ಹಿಟ್ ಸಿನಿಮಾ ಅಖಂಡದ ಮುಂದುವರಿದ ಭಾಗವಾಗಿ 'ಅಖಂಡ 2'. ಪ್ರಜ್ಞಾ ಜೈಸ್ವಾಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮ್ ಅಚಂತಾ ಮತ್ತು ಗೋಪಿ ಅಚಂತಾ ನಿರ್ಮಿಸಿರುವ ಈ ಚಿತ್ರ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  

The India House movie : ಕಾರ್ತಿಕೇಯ ಸರಣಿಯ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿರುವ ತೆಲುಗು ಹೀರೋ ನಿಖಿಲ್ ಸಿದ್ಧಾರ್ಥ್, ಸಾಯಿ ಮಂಜ್ರೇಕರ್ ಕಾಂಬೋದಲ್ಲಿ 'ದಿ ಇಂಡಿಯಾ ಹೌಸ್' ಸಿನಿಮಾ ಮೂಡಿಬರುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ರಾಮ್ ವಂಶಿ ಕೃಷ್ಣ ಈ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ವರ್ಷ ಚಿತ್ರ ಥಿಯೇಟರ್‌ಗಳಿಗೆ ಬರಲಿದೆ.  

Ghaati movie : ಕ್ರಿಶ್ ಜಗರ್ಲಮುಡಿ ನಿರ್ದೇಶನದ, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ 'ಘಾಟಿ' 2025 ರಲ್ಲಿ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟೀಸರ್ ನಲ್ಲಿ ಅನುಷ್ಕಾ ಅಗ್ರೆಸಿವ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.  

Bison Movie : ಧ್ರುವ ವಿಕ್ರಮ್ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ತಮಿಳಿನ 'ಬೈಸನ್' ಭಾರೀ ನಿರೀಕ್ಷೆಯನ್ನು ಹೊಂದಿದೆ. ಮಾರಿ ಸೆಲ್ವರಾಜ್ ನಿರ್ದೇಶನದ ಈ ಸ್ಪೋರ್ಟ್ಸ್ ಡ್ರಾಮಾ 2025 ರಲ್ಲಿ ಬಿಡುಗಡೆಯಾಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link