ಆಮೆಯ ಉಂಗುರ ಈ 4 ರಾಶಿಯ ಜನರಿಗೆ ಒಳ್ಳೆಯದಲ್ಲ: ಅಪ್ಪಿತಪ್ಪಿ ಧರಿಸಿದರಂತೂ ಬಾಳು ಗೋಳಾವುದು.. ತಪ್ಪಿದ್ದಲ್ಲ ಅಪಾಯ!

Thu, 22 Aug 2024-3:57 pm,

ಆಮೆಯನ್ನು ಯಶಸ್ಸು, ನಿರಂತರತೆ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಡುವುದು ಮಂಗಳಕರ ಎಂದು ವಾಸ್ತು ಶಾಸ್ತ್ರ ನಂಬುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆಮೆ ವಿಷ್ಣುವಿನ "ಕೂರ್ಮ" ಅವತಾರವಾಗಿದೆ. ಇದೇ ಕಾರಣದಿಂದ ಮನೆಯಲ್ಲಿ ಆಮೆಯ ವಿಗ್ರಹವನ್ನು ಇಡುವುದರಿಂದ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ.

 

ಮನೆಯಲ್ಲಿ ಆಮೆಯ ವಿಗ್ರಹವನ್ನು ಇಡುವುದರಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಇನ್ನು ಇದಲ್ಲದೆ, ಫ್ಯಾಷನ್ ಯುಗದಲ್ಲಿ ಬೆಳ್ಳಿ ಆಮೆ ಉಂಗುರ ತೊಡುವ ಟ್ರೆಂಡ್ ಕೂಡ ಹೆಚ್ಚಾಗಿದೆ. ಹೆಚ್ಚಿನ ಜನರು ಆಮೆಯ ಉಂಗುರವನ್ನು ಧರಿಸಿರುವುದನ್ನು ಕಾಣಬಹುದು. ಆದರೆ ಜೋತಿಷ್ಯ ಶಾಸ್ತ್ರದ ಪ್ರಕಾರ ಈ 4 ರಾಶಿಯ ಜನರು ಆಮೆ ಉಂಗುರವನ್ನು ಧರಿಸಬಾರದು.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆಯ ಉಂಗುರವನ್ನು ಧರಿಸುವುದು ಶುಭ. ಆದರೆ, 4 ರಾಶಿಗಳ ಜನರು ಆಮೆಯ ಉಂಗುರವನ್ನು ಧರಿಸಬಾರದು. ಮೇಷ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿಯವರು ಬೆಳ್ಳಿಯ ಉಂಗುರವನ್ನು ಧರಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಒಂದು ವೇಳೆ ಈ ರಾಶಿಯ ಜನರು ಆಮೆ ಉಂಗುರವನ್ನು ಧರಿಸಬೇಕೆಂದಿದ್ದರೆ, ಅದಕ್ಕೂ ಮುನ್ನ ಒಮ್ಮೆ ಜ್ಯೋತಿಷಿಯನ್ನು ಸಂಪರ್ಕಿಸಬೇಕು.

 

ಈ ನಾಲ್ಕು ರಾಶಿಗಳ ಜನರು ಆಮೆಯ ಉಂಗುರವನ್ನು ಅತ್ಯಂತ ಎಚ್ಚರಿಕೆಯಿಂದ ಧರಿಸಬೇಕು. ಏಕೆಂದರೆ ಉದ್ಯೋಗ ಮತ್ತು ವ್ಯವಹಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಜಾತಕದಲ್ಲಿ ಶುಕ್ರನ ಸ್ಥಿತಿಯೂ ಹದಗೆಟ್ಟು, ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಮೆಯ ಉಂಗುರವನ್ನು ಧರಿಸುವುದರಿಂದ ಜೀವನದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದರೊಂದಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ನಕಾರಾತ್ಮಕತೆ ಜೀವನದಿಂದ ದೂರವಾಗುತ್ತದೆ. ಪುರಾಣದಲ್ಲಿ ಭಗವಾನ್ ವಿಷ್ಣುವಿನ ಕೂರ್ಮಾವತಾರದ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ.

 

ಆಮೆ ಮೂರ್ತಿ ಮನೆಯಲ್ಲಿಟ್ಟರೆ, ಕುಟುಂಬಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರುತ್ತದೆ ಎಂದು ಪರಿಗಣಿಸಲಾಗಿದೆ. ಇನ್ನು ಉಂಗುರ ಧರಿಸಿದ ವ್ಯಕ್ತಿಯ ಅದೃಷ್ಟವೂ ಜಾಗೃತಗೊಳ್ಳುತ್ತದೆ ಮತ್ತು ಜೀವನದಲ್ಲಿ ತ್ವರಿತ ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳುತ್ತವೆ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯವನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ಸಂಬಂಧಪಟ್ಟ ವಿಷಯದ ತಜ್ಞರನ್ನು ಸಂಪರ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link