ಆಮೆ ಉಂಗುರವನ್ನು ಈ ಬೆರಳಿಗೆ ಹಾಕಿದರೆ ಒಲಿಯುವುದು ಅದೃಷ್ಟ... ಧನ ಸಂಪತ್ತು ಪ್ರಾಪ್ತಿಯಾಗಿ, ಸಾಲವೇ ಇಲ್ಲದೇ ಸಿರಿವಂತರಾಗುವಿರಿ !
ಆಮೆ ಉಂಗುರ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಫೆಂಗ್ ಶೂಯಿಯಲ್ಲಿ, ಆಮೆಯನ್ನು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಆಮೆ ಉಂಗುರ ವಾಸ್ತು ದೋಷಗಳನ್ನು ನಿವಾರಿಸಿ ಜೀವನದಲ್ಲಿ ಸುಖ ಸಮೃದ್ಧಿಯನ್ನ ತರುತ್ತದೆ. ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಬೆಳ್ಳಿಯಲ್ಲಿ ತಯಾರಿಸಿದ ಆಮೆಯ ಉಂಗುರವನ್ನು ಮಾತ್ರ ಹಾಕಿಕೊಳ್ಳಬೇಕು. ಇತರ ಲೋಹದಿಂದ ಮಾಡಿದ ಆಮೆಯ ಉಂಗುರವು ಅಶುಭ ಪರಿಣಾಮವನ್ನು ಬೀರುತ್ತದೆ.
ಆಮೆಯ ಉಂಗುರವನ್ನು ಯಾವಾಗಲೂ ಬಲಗೈಯಲ್ಲಿ ಧರಿಸಬೇಕು. ಎಡಗೈಗೆ ಆಮೆಯ ಉಂಗುರವನ್ನು ಹಾಕಬಾರದು.
ಆಮೆ ಉಂಗುರವನ್ನು ಬಲಗೈ ತೋರುಬೆರಳು ಅಥವಾ ಮಧ್ಯದ ಬೆರಳಿನಲ್ಲಿ ಧರಿಸಬಹುದು. ಇದು ಕಷ್ಟವನ್ನೆಲ್ಲ ದೂರವಾಗಿಸುತ್ತದೆ. ಮನೆಗೆ ಧನಾಗಮನ ಆಗುತ್ತದೆ.
ಉಂಗುರದಲ್ಲಿನ ಆಮೆಯ ತಲೆಯ ಭಾಗವು ಧರಿಸಿದವರ ಕಡೆಗೆ ಇರಬೇಕು. ಲಕ್ಷ್ಮಿಯ ದಿನವಾದ ಶುಕ್ರವಾರ ಬೆಳಿಗ್ಗೆ ಈ ಆಮೆ ಉಂಗುರ ಧರಿಸಬೇಕು.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.