ಇದುವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲದ ಆರ್‌ಸಿಬಿಯ ಒಟ್ಟು Income ಎಷ್ಟು ಗೊತ್ತಾ? ಅರೆಕ್ಷಣ ಉಸಿರುಗಟ್ಟೋದು ಗ್ಯಾರಂಟಿ
IPL ಮೆಗಾ ಆಕ್ಷನ್ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಈ ಋತುವಿನಲ್ಲಿ ತಂಡಗಳು ಅದಾಗಲೇ ಯಾರನ್ನು ಉಳಿಸಿಕೊಳ್ಳುವುದು ಮತ್ತು ಬಿಡುಗಡೆ ಮಾಡುವುದು ಎಂಬುದರ ಬಗ್ಗೆ ಪ್ಲಾನ್ ರೂಪಿಸಿಕೊಂಡಿವೆ.
ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಆಡುತ್ತವೆ. ಈ ತಂಡಗಳು ಗೆದ್ದರೂ ಸೋತರೂ ಅವರ ಗಳಿಕೆಯಲ್ಲೇನು ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ವರದಿಯ ಪ್ರಕಾರ, ಪ್ರತಿ ತಂಡಗಳು 400 ರಿಂದ 500 ಕೋಟಿ ರೂ. ಗಳಿಕೆ ಮಾಡುತ್ತವೆ
ಬ್ಯುಸಿನೆಸ್ ಲೈನ್, ಮಾರ್ಚ್ 2023 ರಲ್ಲಿ D&P ಅಡ್ವೈಸರಿಯ ವ್ಯವಸ್ಥಾಪಕ ಪಾಲುದಾರ ಸಂತೋಷ್ ಎನ್ ಜೊತೆಗಿನ ಸಂದರ್ಶನವನ್ನು ಪ್ರಕಟಿಸಿತ್ತು. ಇದರ ಪ್ರಕಾರ, ಐಪಿಎಲ್‌ನ ಕೇಂದ್ರ ಪೂಲ್ ಸುಮಾರು 9000 ರಿಂದ 10000 ಕೋಟಿ ರೂ. ಅದರ 50 ಪ್ರತಿಶತ ಪಾಲನ್ನು ತಂಡಗಳ ನಡುವೆ ವಿಂಗಡಿಸಲಾಗುತ್ತದೆ. ಅಂದರೆ ಪ್ರತಿ ತಂಡವು ಸುಮಾರು 450 ರಿಂದ 500 ಕೋಟಿ ರೂ. ಪಡೆಯುತ್ತದೆ.
ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ಮತ್ತು ಲೀಗ್‌ಗಳು ಗಳಿಕೆಯ ಹಲವು ಮೂಲಗಳನ್ನು ಹೊಂದಿವೆ. ಇದರ ಪ್ರಮುಖ ಭಾಗವು ಮಾಧ್ಯಮ ಪ್ರಸಾರ ಹಕ್ಕುಗಳಿಂದ ಬಂದಿದೆ. ಐಪಿಎಲ್ ಹಕ್ಕಿನಿಂದ ಭಾರೀ ಹಣ ಗಳಿಸಿತ್ತು. ಈ ಹಕ್ಕುಗಳನ್ನು 5 ವರ್ಷಗಳವರೆಗೆ ಮಾರಾಟ ಮಾಡಲಾಗುತ್ತದೆ. ಐಪಿಎಲ್ ಪ್ರಾಯೋಜಕತ್ವದಿಂದಲೂ ಉತ್ತಮ ಮೊತ್ತವನ್ನು ಗಳಿಸುತ್ತದೆ. ಪ್ರತಿ ತಂಡದ ಜರ್ಸಿಯಲ್ಲಿ ಪ್ರಾಯೋಜಕರ ಲೋಗೋಗಳನ್ನು ಮುದ್ರಿಸಲಾಗುತ್ತದೆ. ಇದರೊಂದಿಗೆ ಪಂದ್ಯದ ವೇಳೆ ಕ್ರೀಡಾಂಗಣದ ಹಲವೆಡೆ ಜಾಹೀರಾತುಗಳನ್ನು ಹಾಕಲಾಗುತ್ತದೆ.
ಇನ್ನು ಆಟಗಾರರ ವೆಚ್ಚದ ಬಗ್ಗೆ ಮಾತನಾಡಿದರೆ, ಅದು ಆದಾಯಕ್ಕಿಂತ ಕಡಿಮೆ. ಪ್ರತಿ ತಂಡವು ಹರಾಜಿಗಾಗಿ 100 ಕೋಟಿ ರೂ. ಖರ್ಚು ಮಾಡಿದರೆ, ಈ ವೆಚ್ಚದ ಜೊತೆಗೆ ತಂಡದ ಹೋಟೆಲ್, ಆಹಾರ ಮತ್ತು ಪರಿಕರಗಳ ವೆಚ್ಚವೂ ಸೇರಿರುತ್ತದೆ. ಆದರೆ ಈ ಎಲ್ಲ ಖರ್ಚು ಆದಾಯಕ್ಕಿಂತ ಕಡಿಮೆ ಎನ್ನಬಹುದು.
ಇನ್ನು ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆದಾಯದ ಬಗ್ಗೆ ಮಾತನಾಡುವುದಾದರೆ, 2024ರ ಹಣಕಾಸು ವರ್ಷದಲ್ಲಿ 6.3 ಶತಕೋಟಿ ಭಾರತೀಯ ರೂಪಾಯಿಗಳ ಆದಾಯವನ್ನು ಹೊಂದಿತ್ತು. ಈ ಆದಾಯದ ಬಹುಪಾಲು ಆದಾಯವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (BCCI) ಕೇಂದ್ರ ಹಕ್ಕುಗಳ ಆದಾಯದಿಂದ ಬಂದಿದೆ.
RCB ಯ ಆದಾಯವು 2023-24 ರಲ್ಲಿ 163% ರಷ್ಟು ಹೆಚ್ಚಾಗಿದೆ. ಅಂದರೆ ಹಿಂದಿನ ವರ್ಷದಲ್ಲಿ ₹247 ಕೋಟಿಯಿಂದ ₹650 ಕೋಟಿಗೆ ಏರಿಕೆಯಾಗಿದೆ. ಇದರಿಂದ ಹಿಂದಿನ ವರ್ಷ ₹15 ಕೋಟಿ ನಿವ್ವಳ ನಷ್ಟಕ್ಕೆ ಹೋಲಿಸಿದರೆ ₹222 ಕೋಟಿ ನಿವ್ವಳ ಲಾಭ ಬಂದಿದೆ.