ಈ ರಾಶಿಯವರು ಪಟ್ಟ ಪಾಡುಗಳೆಲ್ಲಾ ಕೊನೆ ! ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆ
ರಾಹು ಗ್ರಹವು ಈಗ 30 ಅಕ್ಟೋಬರ್ 2023 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ರಾಹುವಿನ ಈ ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ. ಹಾಗಿದ್ದರೆ ಆ ಅದೃಷ್ಟ ರಾಶಿಗಳು ಯಾವುವು ನೋಡೋಣ.
ನಿಮ್ಮ ರಾಶಿಯ ಆರನೇ ಭಾಗದಲ್ಲಿ ರಾಹುವಿನ ಸಂಕ್ರಮಣ ನಡೆಯಲಿದೆ. ರಾಹುವಿನ ಈ ಸಂಕ್ರಮಣ ತುಂಬಾ ಪ್ರಯೋಜನಕಾರಿ ಸಾಬೀತಾಗಲಿದೆ. ಹಠಾತ್ ಆಗಿ ಕೈ ಸೇರುವ ಹಣದಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ನಿಮ್ಮ ಎದುರಾಳಿಗಳನ್ನು ಗೆಲ್ಲುವುದು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು. ಉದ್ಯೋಗಿಗಳಿಗೆ ಇನ್‌ಕ್ರಿಮೆಂಟ್ ಜೊತೆಗೆ ಬಡ್ತಿ ಕೂಡಾ ಸಿಗುವುದು.
ರಾಹು ಸಂಚಾರದಿಂದ ಈ ರಾಶಿಯವರ ಅದೃಷ್ಟವೇ ಬದಲಾಗುವುದು. ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ವಿದೇಶಕ್ಕೆ ಹೋಗುವ ಆಲೋಚನೆ ಇದ್ದರೆ ನಿಮ್ಮ ಆಸೆ ಈಗ ಈಡೇರುವುದು. ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ವೆಚ್ಚಗಳು ಸ್ಥಿರವಾಗಿರುತ್ತವೆ.
ರಾಹು ಗ್ರಹದ ಸಂಚಾರದೊಂದಿಗೆ ಹಣದ ಹರಿವು ಕೂಡಾ ಹೆಚ್ಚಾಗುವುದು. ರಾಹುವಿನ ಸ್ಥಾನ ಬದಲಾವಣೆಯೊಂದಿಗೆ, ಲಾಟರಿ ಅಥವಾ ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)