Trading Tips: F&Oದಲ್ಲಿ ಹಣ ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಜನರು ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡುವ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ. ಈ ಟ್ರೇಡಿಂಗ್‍ನಲ್ಲಿ ಜನರು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಲ್ಲಿ F&O ಕೂಡ ಸೇರಿದೆ. F&Oನ ಪೂರ್ಣ ಹೆಸರು ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್. ಆದರೆ ಇದು ಸಾಕಷ್ಟು ಅಪಾಯಕಾರಿ, ನಿಮ್ಮ ಸಣ್ಣ ತಪ್ಪು ಪೂರ್ತಿ ಬಂಡವಾಳವನ್ನೇ ನುಂಗಿಹಾಕುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮಾಡುವಾಗ ಲಾಭದ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಲಾಭದ ಗುರಿ ಎಂದರೆ ನೀವು ಟ್ರೇಡಿಂಗ್‍ನಿಂದ ಎಷ್ಟು ಲಾಭ ಗಳಿಸಲು ಬಯಸುತ್ತೀರಿ ಎಂಬುದನ್ನು ಮುಂಚಿತವಾಗಿಯೇ ಗುರಿ ಸಿದ್ಧಪಡಿಸಿಕೊಳ್ಳಬೇಕು. ಹಾಗೆಯೇ ಹೆಚ್ಚು ದುರಾಸೆಯೇ ಬೇಡ. ದುರಾಸೆಯಿಂದ ಕಡಿಮೆ ಲಾಭ, ಹೆಚ್ಚು ನಷ್ಟವಾಗುವ ಸಂಭವವಿದೆ. ಹೀಗಾಗಿ ಪ್ರತಿ ಟ್ರೇಡಿಂಗ್‍ನಲ್ಲಿ ಲಾಭದ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ಟ್ರೇಡಿಂಗ್ ಮಾಡಿ. ಅಲ್ಲದೆ ನೀವು ಲಾಭವನ್ನು ಪಡೆದಂತೆ, ಟ್ರೇಡಿಂಗ್‍ನಿಂದ ನಿರ್ಗಮಿಸಿ. ನೀವು ಪಡೆಯುತ್ತಿರುವ ಲಾಭವು ಸ್ವಲ್ಪ ಹೆಚ್ಚಾಗಬೇಕೆಂದು ಭಾವಿಸಿದರೆ ನಿಧಾನವಾಗಿ ಯೋಚಿಸಿರಿ. ಆಗಾಗ ಕುಸಿತವನ್ನು ಎದುರಿಸಬೇಕಾಗುತ್ತದೆ ಮತ್ತು ಪಡೆಯುವ ಲಾಭವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಜನರು ಲಾಭದ ಗುರಿಯತ್ತ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು.
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮಾಡುವಾಗ, ನಿಮ್ಮ ಸಂಪೂರ್ಣ ಬಂಡವಾಳವನ್ನು ಒಂದೇ ಬಾರಿಗೆ ಟ್ರೇಡಿಂಗ್‍ಗಾಗಿ ಹೂಡಿಕೆ ಮಾಡಬಾರದು. ಯಾವಾಗಲೂ ಸಣ್ಣ ಬಂಡವಾಳದೊಂದಿಗೆ ಟ್ರೇಡಿಂಗ್ ಮಾಡಿ. ಹೀಗಾಗಿ ನಷ್ಟದ ಸಂದರ್ಭದಲ್ಲಿ, ದೊಡ್ಡ ನಷ್ಟವನ್ನು ತಪ್ಪಿಸಬಹುದು. ಇದಲ್ಲದೆ ಸ್ವಲ್ಪ ಬಂಡವಾಳವನ್ನು ಹೂಡಿಕೆ ಮಾಡುವ ಮೂಲಕ, ಕುಸಿತದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಟ್ರೇಡಿಂಗ್‍ನಲ್ಲಿ ಮತ್ತೆ ಹಣ ಹೂಡಿಕೆ ಮಾಡಲು ನಿಮಗೆ ಅವಕಾಶವಿದೆ. ಇದರಿಂದಾಗಿ ನೀವು ಕಡಿಮೆ ಬೆಲೆಗೆ ಹೆಚ್ಚಿನ ಷೇರುಗಳನ್ನು ಖರೀದಿಗಳನ್ನು ಮಾಡಬಹುದು.
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಸಹ Expiry Dateನ್ನು ಹೊಂದಿವೆ. Expiry Dateನಂದು ನೀವು ಟ್ರೇಡಿಂಗ್ ಕ್ಲೋಸ್ ಮಾಡದಿದ್ದರೆ, ಅದು ಸ್ವಯಂ ಇತ್ಯರ್ಥಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಟ್ರೇಡಿಂಗ್ Expiryಯ ಮೊದಲು ಕ್ಲೋಸ್ ಮಾಡಬೇಕು ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಟ್ರೇಡಿಂಗ್‍ನಲ್ಲಿ ಸ್ಟಾಪ್‍ಲಾಸ್ ಬಹಳ ಮುಖ್ಯ. ಸ್ಟಾಪ್‍ಲಾಸ್ ಇಲ್ಲದೆ ಟ್ರೇಡಿಂಗ್ ಮಾಡುವುದು ಸೂಕ್ತವಲ್ಲ. ನಷ್ಟವನ್ನು ಕಡಿಮೆ ಮಾಡಲು ಸ್ಟಾಪ್ ಲಾಸ್ ಸಹಾಯ ಮಾಡುತ್ತದೆ. ಸ್ಟಾಪ್ ಲಾಸ್ ಇಲ್ಲದೇ ವಹಿವಾಟು ನಡೆಸಿದರೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ.