ಗುಡ್ಡಗಾಡು ಪ್ರದೇಶಗಳಲ್ಲಿ ಸಿಗುವ ಈ ಕಾಯಿಯನ್ನು ಮೊಸರಿನಲ್ಲಿ ಬೆರೆಸಿ ಬಳಸಿದರೆ ಕೂದಲು ಪರ್ಮನೆಂಟ್ ಆಗಿ ಕಪ್ಪಾಗಿ, ಕಾಂತಿಯುತವೂ ಆಗುತ್ತೆ!
ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮಾರ್ಕೆಟ್ನಲ್ಲಿ ದೊರೆಯುವ ಹೇರ್ ಡೈ ಗಳ ಬಳಕೆ ತಕ್ಷಣಕ್ಕೆ ಕೂದಲನ್ನು ಕಪ್ಪಾಗಿಸುತ್ತದೆ.
ಆದರೆ, ಗುಡ್ಡಗಾಡು ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ಗಿಡಮೂಲಿಕೆಯ ಸಹಾಯದಿಂದ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಆ ಗಿಡಮೂಲಿಕೆಯೇ 'ಸೀಗೆಕಾಯಿ/ಶಿಕಾಕಾಯಿ'.
ಸೀಗೆಕಾಯಿಯಲ್ಲಿ ಸಪೋನಿನ್ ಎಂಬ ಸಂಯುಕ್ತವಿದೆ. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಡಲು ಲಾಭದಾಯಕ. ಇದಲ್ಲದೆ ಸೀಗೆಕಾಯಿಯಲ್ಲಿ ಕಂಡು ಬರುವ ವಿಟಮಿನ್ ಹಾಗೋ ಆಂಟಿ ಆಕ್ಸಿಡೆಂಟ್ ಗಳು ಕೂದಲಿಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.
ಮೊಸರು ಕೂದಲಿಗೆ ಅತ್ಯುತ್ತಮ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿರುವ ಕೊಬ್ಬಿನಾಮ್ಲಗಳು, ಪ್ರೊಟೀನ್, ಪೋಷಕಾಂಶಗಳು ಕೂದಲಿನ ಕಿರು ಚೀಲಗಳನ್ನು ಬಳಪಡಿಸುತ್ತದೆ.
ರಾತ್ರಿ ಸೀಗೆಕಾಯಿಯನ್ನು ನೆನೆಸಿಟ್ಟು ಬೆಳಿಗ್ಗೆ ಸೀಗೆಕಾಯಿಯನ್ನು ರುಬ್ಬಿ ಅದಕ್ಕೆ ಸ್ವಲ್ಪ ಮೊಸರನ್ನು ಬೆರೆಸಿ ಈ ಪೇಸ್ಟ್ ಅನ್ನು ಕೂದಲಿಗೆ ಅನ್ವಯಿಸಿ.
ಹೇರ್ ಮಾಸ್ಕ್ ಅನ್ವಯಿಸಿದ 2 ಗಂಟೆ ಬಳಿಕ ಸಾಮಾನ್ಯ ನೀರಿನಿಂದ ಹೇರ್ ವಾಶ್ ಮಾಡಿ.
ಆಯುರ್ವೇದದ ಪ್ರಕಾರ, ಸೀಗೆಕಾಯಿ ನೈಸರ್ಗಿಕ ಶಾಂಪೂ ಆಗಿ ಕೂದಲಿನಲ್ಲಿ ಜಿಡ್ಡು ನಿವಾರಿಸುವುದರ ಜೊತೆಗೆ ಕೂದಲಿಗೆ ನೈಸರ್ಗಿಕ ಕಪ್ಪು, ಹೊಳಪನ್ನು ನೀಡುತ್ತದೆ.
ಸೀಗೆಕಾಯಿ ಬಳಕೆಯಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು. ಹಾಳಾದ ಕೂದಲನ್ನು ರಿಪೇರಿ ಮಾಡಿ ಮಾರುದ್ದ ಕಾಂತಿಯುತ ಕೂದಲನ್ನು ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.