ನಿಮ್ಮ ಮನೆಯಲ್ಲಿನ ನೆಗೆಟಿವ್‌ ಎನರ್ಜಿ ಹೋಗಲಾಡಿಸಲು ಹೀಗೆ ಮಾಡಿ.. ಇದರಿಂದ ನಿಮ್ಮ ಕುಟುಂಬ ಸುಖವಾಗಿರುತ್ತದೆ..!

Sun, 14 Jul 2024-1:28 pm,

ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನು ನಮ್ಮ ದೇಶದಲ್ಲಿ ಅನೇಕ ಜನರು ನಂಬುತ್ತಾರೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಿಂದ ದುಷ್ಟ ಶಕ್ತಿಯು ದೂರವಾಗುತ್ತದೆ ಮತ್ತು ಶುಭವು ಬರುತ್ತದೆ ಎಂದು ನಂಬಲಾಗಿದೆ. ಇಂದು ನಾವು ಅನೇಕ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಗಾಜಿನ ಲೋಟದಲ್ಲಿ ನಿಂಬೆಯನ್ನು ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಇದರಿಂದ ಏನು ಪ್ರಯೋಜನ ಎಂದು ತಿಳಿಯಲು ಮುಂದೆ ಓದಿ...  

ನಿಂಬೆ ಕೇವಲ ಹಣ್ಣಷ್ಟೆ ಅಲ್ಲ ಇದು ವಿಶಿಷ್ಟವಾದ ಆಧ್ಯಾತ್ಮಿಕ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೆಟ್ಟ ಶಕ್ತಿಯನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಅನೇಕ ಜನರು ಬಳಸುತ್ತಾರೆ.  

ಇದನ್ನು ದೇವತೆಗಳ ನೆಚ್ಚಿನ ದೈವಿಕ ಹಣ್ಣು ಎಂದೂ ನಂಬಾಲಗಿದೆ ಅದಕ್ಕಾಗಿಯೇ ನಿಂಬೆಗೆ ದೇವ ಕಣಿ ಎಂಬ ಹೆಸರಿದೆ. ಇದಲ್ಲದೆ, ನಿಂಬೆಹಣ್ಣಿಗೆ ಜೀವವಿದೆ ಎಂದು ವೈದಿಕ ಗ್ರಂಥಗಳು ಹೇಳುತ್ತವೆ. ಅಷ್ಟೆ ಅಲ್ಲ ನಿಂಬೆಗೆ ಮಂತ್ರಗಳನ್ನು ಸ್ವೀಕರಿಸುವ ಶಕ್ತಿ ಇದೆ. ಅದಕ್ಕಾಗಿಯೇ ಇದನ್ನು ದೇವರ ನೆಚ್ಚಿನ ಹಣ್ಣು ಎಂದು ಕರೆಯಲಾಗುತ್ತದೆ ಎಂದು ನಂಬಲಾಗಿದೆ.  

ನೀರಿಗೆ ನಿಂಬೆಹಣ್ಣನ್ನು ಹಾಕಿ ಲೋಟದಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು ಏನು..? ಆಧ್ಯಾತ್ಮಿಕವಾಗಿ ಹೇಳುವುದಾದರೆ, ನಿಂಬೆಹಣ್ಣುಗಳು ಯಾವುದನ್ನಾದರೂ ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಯಾರಾದರೂ ಕೆಟ್ಟ ಉದ್ದೇಶದಿಂದ ನಮ್ಮ ಹತ್ತಿರ ಬಂದರೆ, ಒಂದು ಲೋಟ ನೀರಿನಲ್ಲಿ ನಿಂಬೆಹಣ್ಣನ್ನು ಇಡಿ ಇದರಿಂದ ದುಷ್ಟ ಶಕ್ತಿ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಜೊತೆಗೆ ದುಷ್ಟ ಶಕ್ತಿಯ ಪ್ರಭಾವವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.  

ನೀರಿಗೆ ಹೆಚ್ಚಿನ ಶಕ್ತಿಯಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ನೀರು ತನ್ನ ಸುತ್ತಲಿನ ಶಕ್ತಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಭಗವಂತನ ನಾಮಸ್ಮರಣೆ ಮಾಡುವಾಗ ನೀರನ್ನು ಕಲಶವಾಗಿ, ಪೂಜೆಯ ಸಮಯದಲ್ಲಿ ತೀರ್ಥವಾಗಿ, ಕೆಲವೊಮ್ಮೆ ಸಂತರು ಇತರರನ್ನು ಆಶೀರ್ವದಿಸಲು ಅಥವಾ ಶಪಿಸಲು ನೀರನ್ನು ಬಳಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ.  

ನೀವು ಮನೆಯಲ್ಲಿ ಮತ್ತು ಅಂಗಡಿಗಳಲ್ಲಿ ಶುಕ್ರವಾರದಂದು ಒಂದು ಲೋಟವನ್ನು ನೀರಿನಿಂದ ತುಂಬಿಸಬಹುದು ಮತ್ತು ಅದರಲ್ಲಿ ನಿಂಬೆಹಣ್ಣನ್ನು ಹಾಕಬಹುದು. ಹೀಗೆ ಸುರಿದ ನೀರನ್ನು ಮುಂದಿನ ಶುಕ್ರವಾರ ಬದಲಾಯಿಸಿ ಅದಕ್ಕೆ ಹೊಸ ನಿಂಬೆಹಣ್ಣು ಹಾಕಬೇಕು ಎನ್ನುತ್ತಾರೆ ಆಧ್ಯಾತ್ಮಿಕ ಜ್ಯೋತಿಷಿಗಳು. ಹೀಗೆ ಮಾಡಿದರೆ ಋಣಾತ್ಮಕ ಶಕ್ತಿಗಳು ನಾಶವಾಗಿ ಒಳ್ಳೆಯದೇ ಆಗುತ್ತದೆ ಎಂದು ಹೇಳಲಾಗುತ್ತದೆ.   

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link