ಗರ್ಭಿಣಿಯಾದ ಹುಡುಗ, ಮಾರ್ಚ್‌ನಲ್ಲಿ ಮಗುವಿಗೆ ಜನ್ಮ, ತೃತೀಯಲಿಂಗಿ ದಂಪತಿಗಳ ವಿಶಿಷ್ಟ ಕಥೆ!

Sat, 04 Feb 2023-3:44 pm,

ಮುಂಬರುವ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ದಂಪತಿಗಳ ಕಥೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಇವರಿಬ್ಬರು ತೃತೀಯಲಿಂಗಿ ದಂಪತಿಗಳು ಎಂಬುದು ವಿಶೇಷ. ಇಬ್ಬರೂ ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅವರೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಾಸ್ತವವಾಗಿ, ಅವರು ಕೇರಳದ ಕೋಝಿಕ್ಕೋಡ್ ನಿವಾಸಿಗಳು, ಅವರ ಹೆಸರು ಸಹದ್ ಮತ್ತು ಜಿಯಾ ಪಾವಲ್. ಇವರು ತೃತೀಯಲಿಂಗಿ ದಂಪತಿಗಳು. ಮಾಧ್ಯಮ ವರದಿಗಳ ಪ್ರಕಾರ, 23 ವರ್ಷದ ಸಹದ್ ಮತ್ತು 21 ವರ್ಷದ ಟ್ರಾನ್ಸ್ ಮಹಿಳೆ ಜಿಯಾ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಜಿಯಾ ಹುಡುಗನಾಗಿ ಹುಟ್ಟಿ ನಂತರ ಹುಡುಗಿಯಾಗಿ ಬದಲಾಗಿದ್ದಾರೆ. ಜಹಾದ್ ಹುಡುಗಿಯಿಂದ ಹುಡುಗನಾಗಿ ಬದಲಾಗಿದ್ದಾಳೆ.

ನಾನು ಹುಟ್ಟಿನಿಂದ ಮಹಿಳೆ ಅಲ್ಲ ಆದರೆ ಮಗು ನನ್ನನ್ನು ತಾಯಿ ಎಂದು ಕರೆಯಬೇಕು ಎಂಬ ಮಹಿಳೆಯ ಕನಸನ್ನು ನಾನು ಹೊಂದಿದ್ದೇನೆ ಎಂದು ಜಿಯಾ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ನಾವು ಮೂರು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ತಂದೆ ಎಂದು ಕರೆಯುವುದು ಜಿಹಾದ್‌ನ ಕನಸು. ನಮ್ಮಿಬ್ಬರ ಸಹಕಾರದಿಂದಲೇ ನನ್ನ ಹೊಟ್ಟೆಯಲ್ಲಿ 8 ತಿಂಗಳ ಮಗುವಿದೆ ಎಂದು ಬರವೆದುಕೊಂಡಿದ್ದಾರೆ.

ಇನ್ನೊಂದು ಮಾಧ್ಯಮದ ವರದಿ ಪ್ರಕಾರ, ಮಾರ್ಚ್ ತಿಂಗಳಲ್ಲೇ ಇಬ್ಬರೂ ಮಗುವಿಗೆ ಪೋಷಕರಾಗಲಿದ್ದಾರೆ. ಮಗುವಿನ ಜನನದ ನಂತರ ಎದೆಹಾಲು ಬ್ಯಾಂಕ್ ಮೂಲಕ ಆಹಾರ ನೀಡುವ ಯೋಜನೆ ಇದೆ. ಭಾರತದ ಟ್ರಾನ್ಸ್‌ಜೆಂಡರ್ ಸಮುದಾಯದಲ್ಲಿ ಈ ದಂಪತಿ ಮಗುವಿಗೆ ಜನ್ಮ ನೀಡಲು ಮುಂದಾಗಿರುವ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗುತ್ತಿದೆ.

ಜಿಯಾ ಕೋಯಿಕ್ಕೋಡ್‌ನಲ್ಲಿ ಶಾಸ್ತ್ರೀಯ ನೃತ್ಯ ಶಿಕ್ಷಕಿಯೂ ಹೌದು. ಮೂರು ವರ್ಷಗಳ ಹಿಂದೆ ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ, ನಂತರ ನಮ್ಮ ಜೀವನವು ಇತರ ಟ್ರಾನ್ಸ್‌ಜೆಂಡರ್ಳಿಗಿಂತ ಭಿನ್ನವಾಗಿರಬೇಕು ಎಂದು ಭಾವಿಸಿದೆವು. ನಮ್ಮ ನಂತರ ಈ ಪ್ರಪಂಚದಲ್ಲಿ ಯಾರಾದರೂ ಇರಬೇಕೆಂದರೆ ನಮಗೆ ಮಗು ಬೇಕು, ಅದಕ್ಕಾಗಿಯೇ ನಾವು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link