ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೂ ಮೂರು ತಿಂಗಳು ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ

Tue, 09 Jan 2024-6:42 am,

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಳದಾತ ಎಂದು ಹೇಳಲಾಗುತ್ತದೆ. ಶನಿ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. 

ಶನಿ ರಾಶಿ ಬದಲಾವಣೆ:  2023ರ ಆರಂಭದಲ್ಲಿ ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ 2024ರಲ್ಲಿಯೂ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

ಶನಿ ನಕ್ಷತ್ರ ಬದಲಾವಣೆ:  2023ರ ನವೆಂಬರ್ 24ರಂದು ಶತಭಿಷ ನಕ್ಷತ್ರ ಪ್ರವೇಶಿಸಿರುವ ಶನಿ ಮಹಾತ್ಮ ಇನ್ನೂ ಮೂರು ತಿಂಗಳುಗಳ ಕಾಲ ಎಂದರೆ 2024 ರ ಏಪ್ರಿಲ್ 6ರವರೆಗೆ  ಅದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ.  

 ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರ :  ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರದ ಪ್ರಭಾವ ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರ ಎಫೆಕ್ಟ್: ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರದ ಪ್ರಭಾವದಿಂದಾಗಿ ಮೂರು ರಾಶಿಯವರಿಗೆ ಏಪ್ರಿಲ್ 2024ರವರೆಗೆ ಅವರು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ದೊರೆಯಲಿದ್ದು, ಅವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.  ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ:  ಶತಭಿಷ ನಕ್ಷತ್ರದಲ್ಲಿರುವ ಶನಿ ಮಹಾತ್ಮ ಇನ್ನು ಮೂರು ತಿಂಗಳುಗಳ ಕಾಲ ಈ ರಾಶಿಯವರ ಜೀವನದಲ್ಲಿ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. 

ವೃಷಭ ರಾಶಿ:  ಏಪ್ರಿಲ್ ತಿಂಗಳವರೆಗೆ ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರದ ಫಲವಾಗಿ ವೃಷಭ ರಾಶಿಯವರು ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವರು. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮಗೆ ದೊರೆಯಲಿದೆ. ವಿದೇಶ ಪ್ರವಾಸ ಯೋಗವೂ ಇದೆ. 

ಸಿಂಹ ರಾಶಿ:  ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರವು ಸಿಂಹ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಭಾರೀ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಒಟ್ಟಾರೆಯಾಗಿ ಇದು ನಿಮಗೆ ಅದೃಷ್ಟದ ಸಮಯ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link