ನವಂಬರ್‌ ತಿಂಗಳಿನಲ್ಲಿ ಶನಿಯ ಸಂಚಾರ; ಈ ಐದು ರಾಶಿಯವರಿಗೆ ಹೊಡೆಯಲಿದೆ ಭರ್ಜರಿ ಜಾಕ್‌ಪಾಟ್‌!

Tue, 08 Oct 2024-10:29 pm,

ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯನ್ನು ಪ್ರವೇಶಿಸುವುದರಿಂದ ಕೆಲ ರಾಶಿಗಳಿಗೆ ಅಷ್ಟಮ ಶನಿ, ಅರ್ಥಾಷ್ಟಮ ಶನಿಯ ಪ್ರಭಾವ ಬೀರಲಿದೆ. ನವೆಂಬರ್‌ ತಿಂಗಳಿನಲ್ಲಿ ಶನಿಯು ವಕ್ರ ಚಲನೆಯಲ್ಲಿರುತ್ತಾನೆ. ಹೀಗಾಗಿ ಶನಿಯಿಂದ ಉಂಟಾಗುವ ಹಲವು ಕಷ್ಟಗಳು ದೂರಾಗಲಿದೆ. ಈ ರಾಶಿಯವರು ಪ್ರಗತಿ ಸಾಧಿಸಲಿದ್ದು, ಅವರ ಆರ್ಥಿಕ ಪರಿಸ್ಥತಿಯು ಉತ್ತಮವಾಗಿ ಸುಧಾರಿಸಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಸಾಗುವುದರಿಂದ ಅಷ್ಟಮ ಶನಿಯು ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಶನಿಯು ಚಲಿಸುವುದರೊಂದಿಗೆ ಮತ್ತು ಅರ್ಥಾಷ್ಟಮ ಶನಿಯು ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಚಲಿಸುವ ಮೂಲಕ ಪ್ರಾರಂಭವಾಗುತ್ತದೆ. ಅಂದರೆ ನವೆಂಬರ್ ಅಂತ್ಯದಲ್ಲಿ ಶನಿ ಸಂಚಾರ ಅಂತ್ಯವಾಗಲಿದೆ. ಹೀಗಾಗಿ ಈ ರಾಶಿಯ ಜನರಿಗೆ ಅದೃಷ್ಟ ಬದಲಾಗಲಿದೆ. ಉದ್ಯಮಿಗಳಿಗೆ ಉತ್ತಮ ಆರ್ಥಿಕ ಲಾಭ ದೊರೆಯಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿದೆ. ಹಣಕಾಸು ಸಮಸ್ಯೆಗಳಿಂದ ನೀವು ದೂರಾಗುವ ಸಂಭವವಿದೆ. ನವೆಂಬರ್ 15ರಂದು, ಶನಿಯು ಕುಂಭ ರಾಶಿಯಲ್ಲಿ ಸಂಜೆ 5.9ಕ್ಕೆ ಸಂಚರಿಸುತ್ತಾನೆ. ಹೀಗಾಗಿ ಯಾವ ರಾಶಿಯವರು ಲಾಭ ಪಡೆಯುತ್ತಾರೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.

ಶನಿಯು ಕುಂಭ ರಾಶಿಯ ಚಲನೆಯು ಮಿಥುನ ರಾಶಿಯವರಿಗೆ ಅನುಕೂಲಕರವಾಗಲಿದೆ. ಮಿಥುನ ರಾಶಿ ಜನರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ನೀವು ಪಟ್ಟಿರುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಇದಾಗಿರುತ್ತದೆ. ಹಠಾತ್ ಆಗಿ ಆರ್ಥಿಕ ಲಾಭ ಹೆಚ್ಚಾಗಿವ ಸಂಭವ ಇರುತ್ತದೆ. ಈಗಿರುವ ಜವಾಬ್ದಾರಿಯೊಂದಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಶೀಘ್ರವೇ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.  

ಮಿಥುನ ರಾಶಿಯಲ್ಲಿ ಶನಿಯು ನೇರವಾಗಿ ಸಂಚರಿಸುವುದರಿಂದ ಸಿಂಹ ರಾಶಿಯವರ ಸಂಪತ್ತು ಹೆಚ್ಚಾಗುತ್ತದೆ. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನಿಮ್ಮ ಆದಾಯದ ಮಟ್ಟದಲ್ಲಿ ಭಾರೀ ಏರಿಕೆಯಾಗುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ನಿಮಗೆ ವಾಹನ ಖರೀದಿಯ ಭಾಗ್ಯವಿದೆ. ಬಡ್ತಿ, ವೇತನ ಹೆಚ್ಚಳ, ಸೌಲಭ್ಯಗಳ ವೃದ್ಧಿ ಮತ್ತು ಸಂಪತ್ತು ಏರಿಕೆಯ ಅದೃಷ್ಟ ನಿಮಗಿರುತ್ತದೆ.

ನಿಮ್ಮ ಕುಟುಂಬದಲ್ಲಿ ಕೆಲ ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಗಳಿವೆ. ಕನ್ಯಾ ರಾಶಿಯ ಜನರಿಗೆ ಶನಿಯು ಒಳಿತು ಮಾಡುವ ಸಮಯ ಸನ್ನಿಹಿತವಾಗಿದೆ. ಈ ಕಾಲದಲ್ಲಿ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಗಳಿಸಬಹುದು. ಪ್ರವಾಸ, ಶಿಕ್ಷಣ, ವೃತ್ತಿ & ಆರೋಗ್ಯದಲ್ಲಿ ನೀವು ಸುಧಾರಣೆ ಕಾಣುತ್ತೀರಿ.

ಮಂಗಳ ಗ್ರಹವು ವೃಶ್ಚಿಕ ರಾಶಿಯ ಆಡಳಿತ ಗ್ರಹ. ಹೀಗಾಗಿ ಶನಿಗೆ ಇದು ನೇರವಾಗಿ ಸಂಬಂಧಿಸಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ವಾಹನ ಲಾಭ, ಆಸ್ತಿ ಖರೀದಿ, ಶುಭ ಕಾರ್ಯಗಳು ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ದೊಡ್ಡ ಯಶಸ್ಸು ಸಿಗಲಿದೆ.

ಶನಿಯು ಮಕರ ರಾಶಿಯ ಆಡಳಿತ ಗ್ರಹ, ಹೀಗಾಗಿ ಮಕರ ರಾಶಿಯ ಜನರಿಗೆ ಇದು ಫಲಪ್ರದ. ನೀವು ಅಂದುಕೊಂಡಿರುವ ಮಹತ್ವದ ಕಾರ್ಯಗಳು ಪೂರ್ಣಗೊಳ್ಳುವ ಸಕಾಲವಿದು. ಹಣಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಈಗ ದೂರವಾಗುತ್ತವೆ. ಶತ್ರುಗಳ ಮೇಲೆ ನೀವು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಶೀಘ್ರವೇ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link