ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!
ಸೂರ್ಯನು ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ನವೆಂಬರ್ 16ರಂದು ಶನಿವಾರ ಬೆಳಗ್ಗೆ 7.41 ಗಂಟೆಗೆ ತುಲಾ ರಾಶಿಯನ್ನು ತೊರೆಯುತ್ತಾನೆ. ಮಂಗಳನ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.
ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರದಿಂದ ನವೆಂಬರ್ 16ರಿಂದ ಐದು ರಾಶಿಯವರಿಗೆ ಪ್ರಯೋಜನ ದೊರೆಯಲಿದೆ. ವ್ಯಾಪಾರ, ವೃತ್ತಿ, ಉದ್ಯೋಗಾವಕಾಶ, ಹೂಡಿಕೆ, ಆರೋಗ್ಯ ಸಂಬಂಧಿತ ವಿಚಾರಗಳು, ಕುಟುಂಬದ ಜೊತೆ ನೆಮ್ಮದಿ, ವಿವಾಹ ಯೋಗ, ಆಸ್ತಿ ಖರೀದಿ ಸೇರಿದಂತೆ ವಿವಿಧ ರೀತಿಯ ಲಾಭ ಸಿಗಲಿದೆ. ಯಾವೆಲ್ಲ ರಾಶಿಯವರಿಗೆ ಅದೃಷ್ಟದ ಲಾಭ ಸಿಗಲಿದೆ ಎಂದು ತಿಳಿಯಿರಿ...
ವೃಷಭ ರಾಶಿಯವರಿಗೆ ಉದ್ಯೋಗ, ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕವಾಗಿಯೂ ಸೂರ್ಯ ಸಂಚಾರ ನಿಮ್ಮ ಮೇಲೆ ಪ್ರಯೋಜನಕಾರಿಯಾಗಿದೆ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ತರುತ್ತದೆ.
ಸೂರ್ಯನು ವೃಶ್ಚಿಕ ರಾಶಿಗೆ ಬರುವುದು ಕರ್ಕಾಟಕ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಉದ್ಯೋಗದಲ್ಲಿರುವವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ನಿಮಗೆ ಬರಬೇಕಿರುವ ಹಣವು ವಾಪಸ್ ಸಿಗಲಿದೆ. ಹೂಡಿಕೆಗೆ ಇದು ಉತ್ತಮ ಸಮಯ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗುತ್ತೀರಿ.
ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಸೂರ್ಯನ ಪ್ರಭಾವದಿಂದ ನೀವು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗುತ್ತದೆ. ಸಾಮಾಜಿಕವಾಗಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಮಿತ್ರರ ಸಹಕಾರದಿಂದ ಉದ್ಯೋಗಾವಕಾಶಗಳು ದೊರೆಯುತ್ತವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೀವು ಪ್ರತಿದಿನವೂ ವ್ಯಾಯಾಮ ಮಾಡಬೇಕು.
ಮಕರ ರಾಶಿಯವರ ವೈವಾಹಿಕ ಜೀವನದಲ್ಲಿ ಸುಧಾರಣೆ ಕಾಣಬಹುದು. ಕುಟುಂಬದೊಂದಿಗೆ ನೀವು ಸಂತೋಷದಿಂದ ಸಮಯ ಕಳೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆ ಇರುತ್ತದೆ. ನಿಮ್ಮ ತಾಯಿಯಿಂದ ನೀವು ಬೆಂಬಲ ಪಡೆಯುತ್ತೀರಿ. ಸ್ಥಗಿತಗೊಂಡ ನಿಮ್ಮ ಕೆಲಸಗಳು ಆರಂಭವಾಗಲಿದೆ. ನೀವು ಅದೃಷ್ಟದ ಬೆಂಬಲದೊಂದಿಗೆ ಅಪಾರ ಯಶಸ್ಸು ಪಡೆಯುವಿರಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಸಿಗುತ್ತದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಕ್ರಮಣ ಕುಂಭ ರಾಶಿಯವರಿಗೆ ಅನುಕೂಲಕರವಾಗಲಿದೆ. ವ್ಯಾಪಾರದಲ್ಲಿ ಅಪಾರ ಲಾಭ ಇರುತ್ತದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರು ಯಶಸ್ವಿಯಾಗುತ್ತಾರೆ. ಆರ್ಥಿಕ ಕ್ಷೇತ್ರದಲ್ಲಿ ನೀವು ಉತ್ತಮ ಸಾಧನೆ ಮಾಡುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಭೂಮಿ, ಕಟ್ಟಡ, ವಾಹನ ಖರೀದಿಗೆ ಅವಕಾಶವಿದೆ. ಶಿಕ್ಷಣದಲ್ಲಿ ನಿಮಗೆ ಆಸಕ್ತಿ ಹೆಚ್ಚುತ್ತದೆ.