Shukra Gochara: ಇಂದಿನಿಂದ ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ, ಹೆಚ್ಚಾಗಲಿದೆ ಈ ರಾಶಿಯವರ ಸಂಕಷ್ಟ

Mon, 07 Aug 2023-6:33 am,

ಇಂದು, ಆಗಸ್ಟ್ 07, 2023ರಂದು ಶುಕ್ರನು ಚಂದ್ರ ರಾಶಿಯಾದ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಲ್ಲದೆ, ಇದೆ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನೂ ಆರಂಭಿಸಲಿರುವ ಶುಕ್ರ, ಬಳಿಕ ಅಸ್ತಮಿಸಲಿದ್ದಾನೆ. ಆಗಸ್ಟ್ 18, 2023ರಂದು ಶುಕ್ರ ಉದಯಿಸಲಿದ್ದಾನೆ. 

ಇನ್ನು ಕರ್ಕಾಟಕ ರಾಶಿಯಲ್ಲಿ ಶುಕ್ರನ ಸಂಚಾರದಲ್ಲಿನ ಈ ಮೂರು ಬದಲಾವಣೆಗಳು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯವರ ದೃಷ್ಟಿಯಿಂದ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ಆ ನಾಲ್ಕು ರಾಶಿಯವರ ಸಂಕಷ್ಟಗಳು ಹೆಚ್ಚಾಗಲಿದ್ದು, ಜೀವನದಲ್ಲಿ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ... 

ಶುಕ್ರ ರಾಶಿ ಪರಿವರ್ತನೆಯು ಮೇಷ ರಾಶಿಯವರ ಕೌಟುಂಬಿಕ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ದೊಡ್ಡ ಹಣಕಾಸಿನ ನಷ್ಟವನ್ನೂ ಎದುರಿಸಿವ ಸಾಧ್ಯತೆ ಇದ್ದು ನಿಮ್ಮ ಪ್ರೀತಿ ಪಾತ್ರರಿಂದಲೇ ಮಾನಸಿಕ ನೋವನ್ನು ಅನುಭವಿಸಬೇಕಾಗಬಹುದು. ಮಾತ್ರವಲ್ಲ, ನಿಮ್ಮ ವೃತ್ತಿ ಬದುಕಿನಲ್ಲಿ ನಾನಾ ರೀತಿಯ ಸವಾಲುಗಳು ಎದುರಾಗಲಿವೆ. 

ಸ್ವ ರಾಶಿಯಲ್ಲಿಯೇ ಶುಕ್ರನ ಸಂಚಾರದಲ್ಲಿನ ಮೂರು ಬದಲಾವಣೆಗಳು ಈ ರಾಶಿಯವರಿಗೂ ಕೂಡ ಅಷ್ಟು ಉತ್ತಮವಾಗಿರುವುದಿಲ್ಲ. ಶುಕ್ರನ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಮಾತ್ರವಲ್ಲ, ನಿಮ್ಮ ಕುಟುಂಬದ ಹಿರಿಯರು ಅನಾರೋಗ್ಯದಿಂದ ಬಳಲಬಹುದು. ಹೂಡಿಕೆಗಳಿಂದ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿಯೂ ತುಂಬಾ ಜಾಗರೂಕರಾಗಿರಿ. 

ಕರ್ಕಾಟಕ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯವರ ಜೀವನದಲ್ಲಿ ಹಲವು ಸಂಕಷ್ಟಗಳನ್ನು ತಂದೊಡ್ಡಲಿದೆ. ಅದರಲ್ಲೂ, ಮದುವೆ ಸಂಬಂಧಿತ ಮಾತುಕತೆಗಳು ಮುಂದೂಡಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ, ಇಲ್ಲದಿದ್ದರೆ ಇದರಿಂದಲೇ ನಿಮ್ಮ ಕಷ್ಟಗಳು ಕೂಡ ಹೆಚ್ಚಾಗಬಹುದು. ಆದಾಗ್ಯೂ, ನಿರಾಶೆಗೊಳ್ಳದೆ ನಿಮ್ಮ ಪ್ರಯತ್ನವನ್ನು ಮುಂದುವರೆಸಿ ಕತ್ತಲು ಕಳೆದ ಬಳಿಕ ಬೆಳಕು ಬಂದೇ ಬರುತ್ತದೆ. 

ಶುಕ್ರ ರಾಶಿ ಬದಲಾವಣೆ ಮಕರ ರಾಶಿಯವರಿಗೂ ಕೂಡ ಅಷ್ಟು ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಭಾವನಾತ್ಮಕ ಸ್ವಭಾವದಿಂದಲೇ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಾತ್ರವಲ್ಲ, ಇದು ನಿಮ್ಮ ಕಾರ್ಯಕ್ಷಮತೆಯ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಪಾಲುದಾರಿಕೆಯ ವ್ಯವಹಾರ ಮಾಡುವವರು ವಿವಾದಗಳಲ್ಲಿ ಸಿಲುಕಬಹುದು. ಹಾಗಾಗಿ ಎಚ್ಚರಿಕೆಯಿಂದ ಇರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link