Travel 2021: ಈ ಸ್ಥಳಗಳಿಗೆ ಪುರುಷರು ಸುಲಭವಾಗಿ ಭೇಟಿ ನೀಡಬಹುದು, ಆದ್ರೆ Ladies Not Allowed! ಕಾರಣ ಗೊತ್ತೇ?

Fri, 12 Nov 2021-6:59 pm,

1. ರಾಜಸ್ಥಾನದ ಕಾರ್ತಿಕೇಯ ದೇವಸ್ಥಾನ (Kartikeya Temple) - ರಾಜಸ್ಥಾನ ರಾಜ್ಯದ ಪುಷ್ಕರ್ ನಗರದಲ್ಲಿ ಕಾರ್ತಿಕೇಯನ ದೇವಾಲಯವಿದೆ. ಈ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ವಾಸ್ತವವಾಗಿ, ಈ ದೇವಾಲಯದಲ್ಲಿ ಕಾರ್ತಿಕೇಯ ಬ್ರಹ್ಮಚಾರಿ ರೂಪವನ್ನು ಹೊಂದಿದ್ದಾನೆ ಮತ್ತು ಈ ದೇವಾಲಯವನ್ನು ಪ್ರವೇಶಿಸಿದ ಮಹಿಳೆಯರಿಗೆ ದೇವರು ಶಾಪ ನೀಡುತ್ತಾನೆ ಎಂದು ನಂಬಲಾಗಿದೆ. 

2. ಅಮೇರಿಕಾದ ಬರ್ನಿಂಗ್ ಟ್ರೀ ಕ್ಲಬ್ (Burning Tree Club) - ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನಲ್ಲಿ ಪುರುಷರಿಗಾಗಿ ಬರ್ನಿಂಗ್ ಟ್ರೀ ಕ್ಲಬ್ ಎಂಬ ವಿಶಿಷ್ಟವಾದ ಗಾಲ್ಫ್ ಕ್ಲಬ್ ಇದೆ. ಈ ಪ್ರತಿಷ್ಠಿತ ಕ್ಲಬ್‌ನಲ್ಲಿ ಅಧ್ಯಕ್ಷರಿಂದ ಮುಖ್ಯ ನ್ಯಾಯಮೂರ್ತಿಗಳವರೆಗೆ ಸದಸ್ಯರಿದ್ದಾರೆ. ಆದರೆ ಇಂದಿಗೂ ಮಹಿಳೆಯರಿಗೆ ಈ ಕ್ಲಬ್ ಪ್ರವೇಶಿಸಲು ಅವಕಾಶವಿಲ್ಲ.

3. ಮೌಂಟ್ ಎಥೋಸ್, ಗ್ರೀಸ್ (Mount Ethos) - ಇದು 1000 ವರ್ಷಗಳಿಗಿಂತ ಅಧಿಕ ಕಾಲ ಗತಿಸಿದರೂ ಕೂಡ  ಇಂದಿಗೂ ಮಹಿಳೆಯರಿಗೆ ಈ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಗ್ರೀಸ್‌ನ ಮೌಂಟ್ ಅಥೋಸ್‌ನಲ್ಲಿರುವ ಈ ಕ್ಯಾಥೆಡ್ರಲ್ ತುಂಬಾ ಪವಿತ್ರವಾಗಿದೆ, ಇಲ್ಲಿ ಕೇವಲ 100 ಧರ್ಮದ ಪುರುಷರು ಮತ್ತು 10 ಧರ್ಮೇತರ ಪುರುಷರು ಒಂದೇ ಬಾರಿಗೆ ತೀರ್ಥಯಾತ್ರೆ ಮಾಡಬಹುದು. ಇಂದಿಗೂ ಈ ಧಾರ್ಮಿಕ ಪವಿತ್ರ ಚರ್ಚ್‌ನಲ್ಲಿ ಪ್ರಾಚೀನ ನಿಯಮಗಳನ್ನು ಅನುಸರಿಸಲಾಗುತ್ತದೆ.

4. ಸಬರಿಮಲೈ, ಕೇರಳ (Okinoshima Island) - ಕೇರಳದ ಪ್ರಸಿದ್ಧ ದೇಗುಲ ಶಬರಿಮಲೆಗೂ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಆದರೆ, ನಂತರ ನ್ಯಾಯಾಲಯವು ಮಹಿಳೆಯರ ಪರವಾಗಿ ತೀರ್ಪು ನೀಡಿದೆ. ಈ ಬಗ್ಗೆ ಹಲವು ಬಾರಿ ಚರ್ಚೆ ನಡೆದು ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟೆಲ್ಲಾ ಆದರೂ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದು ಕಷ್ಟ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ದೇವತೆಗಳು ಅವಿವಾಹಿತರು ಎನ್ನಲಾಗುತ್ತದೆ.

5. ಒಕಿನೋಶಿಮಾ ಐಲ್ಯಾಂಡ್, ಜಪಾನ್ (Okinoshima Island) - ಇದೊಂದು ಪವಿತ್ರ ಜಪಾನೀ ದ್ವೀಪ, ಓಕಿನೋಶಿಮಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಶಿಂಟೋ ಧರ್ಮ ಮತ್ತು ಸಂಪ್ರದಾಯಗಳ ಕಾರಣದಿಂದಾಗಿ ಅಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಟಾವೊ ತತ್ತ್ವ ಮತ್ತು ಚೀನಾದ ಮಿಶ್ರಣವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link