ಎಸ್‌ಬಿಐನ ಈ ಕಾರ್ಡ್‌ನೊಂದಿಗೆ ಮೆಟ್ರೋದಲ್ಲಿ ಸುಲಭವಾಗಲಿದೆ ನಿಮ್ಮ ಪ್ರಯಾಣ

Sat, 24 Oct 2020-12:39 pm,

ಈ ವಿವಿಧೋದ್ದೇಶ ಕಾರ್ಡ್ ದೆಹಲಿ ಮೆಟ್ರೊದ ಪ್ರಯಾಣಿಕರಿಗೆ ಎಲ್ಲ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ದೆಹಲಿ ಮೆಟ್ರೋ-ಎಸ್‌ಬಿಐ ಕಾರ್ಡ್ ಅನ್ನು ಡಿಎಂಆರ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಗು ಸಿಂಗ್ ಮತ್ತು ಎಸ್‌ಬಿಐ ಕಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶ್ವನಿ ಕುಮಾರ್ ತಿವಾರಿ ನೀಡಿದ್ದಾರೆ.  

ಇದು Contactless ಕಾರ್ಡ್ ಆಗಿದ್ದು ಅದು ಕ್ರೆಡಿಟ್ ಕಾರ್ಡ್ (Credit Card)  ಜೊತೆಗೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಸೌಲಭ್ಯವನ್ನು ಒದಗಿಸುತ್ತದೆ. ಎಸ್‌ಬಿಐ ಕಾರ್ಡ್ ಪ್ರಕಾರ, ದೆಹಲಿ ಮೆಟ್ರೊದಿಂದ ಪ್ರಯಾಣಿಸುವ ದೈನಂದಿನ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.

ಕಂಪನಿಯ ಪ್ರಕಾರ, ಇದು ಬಹುಪಯೋಗಿ ಕಾರ್ಡ್ ಆಗಿದ್ದು, ಇದನ್ನು ಕ್ರೆಡಿಟ್ ಕಾರ್ಡ್ ಮತ್ತು ಮೆಟ್ರೋ ಸ್ಮಾರ್ಟ್ ಕಾರ್ಡ್‌ನಂತೆ ಬಳಸಬಹುದು. ಕಾರ್ಡ್ ಅನ್ನು ಎನ್‌ಎಫ್‌ಸಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದರಿಂದಾಗಿ ಯಾವುದೇ ಮೇಲ್ಮೈಯನ್ನು ಮುಟ್ಟದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಕಾರ್ಡ್‌ನ ವಾರ್ಷಿಕ ಶುಲ್ಕ 499 ರೂಪಾಯಿಗಳು ಮತ್ತು ಇದರೊಂದಿಗೆ ಕಂಪನಿಯು ಅನೇಕ ವಿಶೇಷ ಕೊಡುಗೆಗಳನ್ನು ಸಹ ನೀಡಿದೆ.

ಇದರೊಂದಿಗೆ, ಈ ಕಾರ್ಡ್‌ನಲ್ಲಿ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿದೆ. ಇವುಗಳಲ್ಲಿ ಮೊದಲ ಆಟೋ ಟಾಪ್ ಅಪ್ ವಹಿವಾಟಿನಲ್ಲಿ 50 ರೂ. ಕ್ಯಾಶ್‌ಬ್ಯಾಕ್ ಮತ್ತು ಮೆಟ್ರೊದಲ್ಲಿ ಪ್ರಯಾಣಿಸಲು 10 ಪ್ರತಿಶತ ರಿಯಾಯಿತಿ ಸೇರಿವೆ.

ಎಸ್‌ಬಿಐ ಕಾರ್ಡ್ ಸಿಇಒ ಅಶ್ವನಿ ಕುಮಾರ್ ತಿವಾರಿ ಮಾತನಾಡಿ ಡಿಎಂಆರ್‌ಸಿಯ ವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಈ ಸಹಭಾಗಿತ್ವದಲ್ಲಿ, ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಅನುಭವವನ್ನು ಸುಧಾರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link