Terry Triplets: ಬಾಯ್​ಫ್ರೆಂಡ್​ಗಳಿಗೆ ಗೊಂದಲ ಮೂಡಿಸಿದ್ದಾರೆ ಅನನ್ಯ ತ್ರಿವಳಿ ಸಹೋದರಿಯರು..!

Wed, 06 Oct 2021-5:08 pm,

ದೇವರ ಲೀಲೆ ಹೋಲಿಸಲಾಗದು. ನೀವು ಅವಳಿ ಸಹೋದರಿಯರು ಅಥವಾ ಸಹೋದರರ ಬಗ್ಗೆ ಕೇಳಿರಬಹುದು. ಆದರೆ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿರುವ ಈ ತ್ರಿವಳಿ ಸಹೋದರಿಯರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸಿದ್ದಾರೆ.

ಈ ಮೂವರು ಸಹೋದರಿಯರು ಇಂಗ್ಲೆಂಡ್ ನ ಕೆಂಟ್ ಮೂಲದವರು. ಸೆರೆನಾ, ಬನಾನಾ(Banana) ಮತ್ತು ಆಲಿಸ್ ಟೆರ್ರಿ ಎಂಬ ಹೆಸರಿನ ಈ ಮೂವರು ಸಹೋದರಿಯರು ‘ಟೆರ್ರಿ ಟ್ರಿಪಲ್ಸ್’ ಎಂದೇ ಜನಪ್ರಿಯರಾಗಿದ್ದಾರೆ. ನೋಡಲು ಮೂವರು ಒಂದೇ ರೀತಿ ಇರುವದರಿಂದ ಇವರ ತಂದೆ-ತಾಯಿ ಸೇರಿದಂತೆ ಹತ್ತಿರದ ಪ್ರತಿಯೊಬ್ಬರೂ ಇವರನ್ನು ಗುರುತಿಸುವಲ್ಲಿ ಗೊಂದಲಕ್ಕೀಡಾಗಿದ್ದಾರಂತೆ.    

ಈ ತ್ರಿವಳಿ ಸಹೋದರಿಯರು ಯಾವಾಗಲೂ ಸಂತೋಷವಾಗಿರುತ್ತಾರೆ. ಆದರೆ ಮೂವರು ಒಂದೇ ರೀತಿ ಇರುವುದರಿಂದ ಕೆಲವೊಮ್ಮ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರಂತೆ. ಹೀಗಾಗಿ ಮೂವರು ತಮ್ಮ ಹೆಚ್ಚಿನ ಕೆಲಸಗಳನ್ನು ಒಟ್ಟಿಗೆ ಮಾಡುತ್ತಾರಂತೆ. ಕೆಲವೊಮ್ಮೆ ಅವರು ಒಂದೇ ರೀತಿಯ ಬಟ್ಟೆಗಳನ್ನೂ ಧರಿಸುತ್ತಾರಂತೆ. ಮೇಕಪ್, ಕೂದಲಿಗೆ ಬಣ್ಣ ಹಚ್ಚುವುದು ಸೆರಿದಂತೆ ಮೂವರು ಒಂದೇ ರೀತಿ ಚಟುವಟಿಕೆ ಮಾಡುತ್ತಾರಂತೆ.  

ಈ ತ್ರಿವಳಿ ಸಹೋದರಿಯರು Instagramನಲ್ಲಿ Teri.Triplets ಹೆಸರಿನ ಖಾತೆಯನ್ನು ಹೊಂದಿದ್ದಾರೆ. ಇಲ್ಲಿ ಅವರು ನಿರಂತರವಾಗಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಈ ಮೂವರು ಟಿಕ್‌ಟಾಕ್‌ನಲ್ಲಿ ಸುಮಾರು ಒಂದು ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಈ ಸಹೋದರಿಯರು ಕೆಲವು ಬ್ರಾಂಡ್‌ಗಳನ್ನು ಕೂಡ ಪ್ರಚಾರ ಮಾಡುವ ಮೂಲಕ ಹಣ ಗಳಿಸುತ್ತಾರಂತೆ.

ವರದಿಯ ಪ್ರಕಾರ ಸೆರೆನಾ, ಬನಾನಾ ಮತ್ತು ಆಲಿಸ್ ಅವರ ಒಂದೇ ರೀತಿಯ ನೋಟವು ಅವರ ಬಾಯ್​ಫ್ರೆಂಡ್​ಗಳಿಗೆ ದೊಡ್ಡ ಗೊಂದಲ ಮತ್ತು ತಲೆನೋವು ತಂದಿದೆಯಂತೆ. ಮೂವರಲ್ಲಿ ಯಾರು ನನ್ನ ಗೆಳತಿ ಎಂದು ಕಂಡುಹಿಡಿಯುವುದೇ ಅವರಿಗೆ ದೊಡ್ಡ ಟಾಸ್ಕ್ ಆಗಿದೆಯಂತೆ.  ಆದರೂ ಈ ಮೂವರು ಸಹೋದರಿಯರ ನಡುವಿನ ಬಾಂಧವ್ಯ ಬಹಳ ಗಟ್ಟಿಯಾಗಿದೆ. ಇದರಿಂದ ಅವರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಂತೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link