Trigrahi Yog: ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ- ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಮೂರು ಗ್ರಹಗಳು ಒಟ್ಟಿಗೆ ಸೇರಿದಾಗ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತದೆ.
ಪ್ರಸ್ತುತ ಶನಿ ತನ್ನ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಯಲ್ಲಿ ಉಪಸ್ಥಿತನಿದ್ದು 2025ರವರೆಗೆ ಕುಂಭ ರಾಶಿಯಲ್ಲೇ ಸಂಚರಿಸಲಿದ್ದಾನೆ.
ಈ ತಿಂಗಳಾಂತ್ಯದಲ್ಲಿ ಬುಧ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಮಾರ್ಚ್ ತಿಂಗಳ ಆರಂಭದಲ್ಲಿ ಶುಕ್ರನು ಕೂಡ ಶನಿ ರಾಶಿಚಕ್ರ ಚಿಹ್ನೆ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
ಈ ರೀತಿಯಾಗಿ ಕರ್ಮಕಾರಕನಾದ ಶನಿಯು ಕುಂಭ ರಾಶಿಯಲ್ಲಿ ಇರುವಾಗ ಇದೇ ರಾಶಿಯಲ್ಲಿ ಶುಕ್ರ ಮತ್ತು ಬುಧ ಪ್ರವೇಶದಿಂದ ಈ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ.
ತ್ರಿಗ್ರಾಹಿ ಯೋಗದ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ವೃಷಭ ರಾಶಿಯ ಜನರಿಗೆ ತ್ರಿಗ್ರಾಹಿ ಯೋಗವು ಅತ್ಯಂತ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವ್ಯಾಪಾರಸ್ತರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ಉದ್ಯಮಿಗಳಿಗೆ ಹೂಡಿಕೆಯಿಂದ ಲಾಭವಾಗಲಿದೆ.
ತ್ರಿಗ್ರಾಹಿ ಯೋಗದ ಶುಭ ಪರಿಣಾಮದಿಂದಾಗಿ ಮಿಥುನ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನೀವು ಕೈ ಹಾಕುವ ಕೆಲಸದಲ್ಲೆಲ್ಲ ಭಾರೀ ಯಶಸ್ಸು, ಪ್ರಗತಿಯನ್ನು ಕಾಣುವಿರಿ. ಆರ್ಥಿಕ ಲಾಭದ ಸಾಧ್ಯತೆಯೂ ಇದೆ.
ಸ್ವ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ತ್ರಿಗ್ರಾಹಿ ಯೋಗವು ಕುಂಭ ರಾಶಿ ಜನರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸಗಳಲ್ಲಿ ಯಶಸ್ಸು, ಕೀರ್ತಿಯನ್ನು ಪಡೆಯುವಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.