Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!
ಜೂನ್ 29ರವರೆಗೆ ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಇರುತ್ತದೆ. ನಂತರ ಬುಧವು ಮಿಥುನ ರಾಶಿಯಿಂದ ಕಟಕಕ್ಕೆ ಪ್ರವೇಶಿಸಲಿದೆ. ತ್ರಿಗ್ರಾಹಿ ಯೋಗವನ್ನು ಹೊರತುಪಡಿಸಿ ಈ 3 ಗ್ರಹಗಳು ವಿಭಿನ್ನ ಅದೃಷ್ಟ ಯೋಗಗಳನ್ನು ರೂಪಿಸಲಿವೆ. ಬುಧನು ಭದ್ರ ರಾಜಯೋಗವನ್ನು ನೀಡಲಿದ್ದು, ಇದು ಪಂಚಮಹಾ ಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವೂ, ಶುಕ್ರ-ಸೂರ್ಯರ ಸಂಯೋಗದಿಂದ ಶುಕ್ರಾದಿತ್ಯ ಯೋಗವೂ ಉಂಟಾಗಲಿದೆ. ಬುಧ ಮತ್ತು ಶುಕ್ರರು ಒಟ್ಟಾಗಿ ಲಕ್ಷ್ಮೀನಾರಾಯಣ ಯೋಗವನ್ನು ನೀಡಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಿಥುನ ರಾಶಿಯಲ್ಲಿ ಈ 3 ಗ್ರಹಗಳು ಇರುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಮಿಥುನ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಾಹಿ ಯೋಗದಿಂದ ಯಾವ ರಾಶಿಯವರಿಗೆ ಒಳ್ಳೆಯದು ಎಂದು ತಿಳಿಯಿರಿ.
ಮೇಷ ರಾಶಿಯವರಿಗೆ ಸೂರ್ಯ, ಶುಕ್ರ & ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ & ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸುತ್ತಾರೆ. ಆರೋಗ್ಯವೂ ಚೆನ್ನಾಗಿರುತ್ತದೆ. ನೀವು ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ.
ತುಲಾ ರಾಶಿಯವರಿಗೆ ಬುಧ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಲಾಭದಾಯಕವಾಗಲಿದೆ. ಗ್ರಹಗಳ ಚಲನೆಯಲ್ಲಿನ ಬದಲಾವಣೆಯಿಂದ ಈ ರಾಶಿಯ ಜನರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರಲಿದ್ದು, ವೆಚ್ಚವನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಆಗ ಮಾತ್ರ ನೀವು ಹಣ ಉಳಿಸಬಹುದು. ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲ ಸಿಗಲಿದೆ.
ತ್ರಿಗ್ರಾಹಿ ಯೋಗವು ಮಿಥುನ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದರ ಪರಿಣಾಮ ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ. ಆದಾಯ ಹೆಚ್ಚಿಸಿಕೊಳ್ಳಲು ಅನೇಕ ಹೊಸ ಮೂಲಗಳನ್ನು ಕಂಡುಕೊಳ್ಳುವಿರಿ. ಈ ತಿಂಗಳು ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ವೃತ್ತಿ ಜೀವನದಲ್ಲಿ ಕೆಲವು ಹೊಸ ಜವಾಬ್ದಾರಿ ಸ್ವೀಕರಿಸುತ್ತೀರಿ. ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ.