41 ರಲ್ಲೂ 16ರ ಸೊಬಗು.. ಇಷ್ಟೊಂದು ಫಿಟ್‌ ಆಗಿರಲು ತ್ರಿಶಾ ದಿನನಿತ್ಯ ಏನ್‌ ಮಾಡ್ತಾರೆ ಗೊತ್ತೆ..!

Sun, 18 Aug 2024-8:42 pm,

41ರ ಹರೆಯದಲ್ಲೂ ಇಷ್ಟೊಂದು ಫಿಟ್ನೆಸ್ ಹಾಗೂ ಸೌಂದರ್ಯವನ್ನು ಕಾಯ್ದುಕೊಳ್ಳುತ್ತಿರುವ ತ್ರಿಶಾ ಹಲವರಿಗೆ ಸ್ಪೂರ್ತಿ. ತ್ರಿಶಾ ವಯಸ್ಸಾದಂತೆ ಸುಂದರಿಯಾಗುತ್ತಾಳೆ ಎಂದು ನೆಟ್ಟಿಗರು ಹೊಗಳುತ್ತಾರೆ.. ಇಂಡಸ್ಟ್ರಿಗೆ ಎಂಟ್ರಿಯಾಗಿ ಎರಡು ದಶಕಗಳೇ ಕಳೆದರೂ.. ತ್ರಿಶಾಗೆ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ.. ಇದಕ್ಕೆ ಕಾರಣ ಅವರ ಫಿಟ್ನೆಸ್.  

ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹ ಫಿಟ್ ಆಗುವುದು ಎಲ್ಲರಿಗೂ ಗೊತ್ತು. ಆದರೆ ಕೆಲವೇ ಕೆಲವರು ಅದನ್ನು ಅನುಸರಿಸುತ್ತಾರೆ. ಈ ವಿಷಯವನ್ನು ಕಟ್ಟುನಿಟ್ಟಾಗಿ ಅನುಸರಿಸುವ ನಾಯಕಿಯರಲ್ಲಿ ತ್ರಿಶಾ ಕೂಡ ಒಬ್ಬರು. ಈ ಚೆಲುವೆ ಬೆಳಗ್ಗೆ ಎದ್ದ ತಕ್ಷಣ ಒಂದು ಗಂಟೆ ಕಾರ್ಡಿಯೋ ಜೊತೆಗೆ ವ್ಯಾಯಾಮ ಮಾಡುತ್ತಾಳೆ.   

ಆಹಾರದ ವಿಚಾರದಲ್ಲೂ ಸಾಕಷ್ಟು ನಿಯಮಗಳನ್ನು ಪಾಲಿಸುತ್ತಾಳೆ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. ನಾವು ಸೇವಿಸುವ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರಬೇಕು ಅಂತ ಹೇಳ್ತಾರೆ ತ್ರಿಶಾ.  

ತರಕಾರಿಗಳು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ರಾತ್ರಿಯ ಊಟವನ್ನು ತುಂಬಾ ಬೇಗ ಮುಗಿಸಬೇಕು. ಅಲ್ಲದೆ, ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ನಾವು ಸೇವಿಸುವ ತರಕಾರಿಗಳು ಮತ್ತು ಹಣ್ಣುಗಳಲ್ಲಿ, ಜೀವಸತ್ವಗಳು ಮತ್ತು ಖನಿಜಗಳು ಇವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇವು ದೇಹವನ್ನು ಆರೋಗ್ಯಕರವಾಗಿ ಮತ್ತು ಯೌವನದಿಂದ ಇಡಲು ಸಹಾಯ ಮಾಡುತ್ತದೆ ಅಂತಾರೆ ತ್ರಿಶಾ..     

ತ್ರಿಶಾ ಭೋಜನವನ್ನು ಆದಷ್ಟು ಬೇಗ ಮುಗಿಸುತ್ತಾರೆ. ಸಂಜೆ 6.30ಕ್ಕೆ ಊಟ ಮುಗಿಸಿ ನಂತರ ಎನನ್ನೂ ತಿನ್ನುವುದಿಲ್ಲ. ಅಲ್ಲದೆ, ಅವರು ತಿಂದ ತಕ್ಷಣ ನೀರು ಕುಡಿಯುವುದಿಲ್ಲ. ಪ್ರತಿದಿನ ಸಂಜೆ 6:30ಕ್ಕೆ ಊಟ ಮಾಡುತ್ತೇನೆ ಎನ್ನುತ್ತಾರೆ ತ್ರಿಶಾ. ಅಲ್ಲದೆ, ತಿಂದ ತಕ್ಷಣ ನೀರು ಕುಡಿಯಬೇಡಿ. ವ್ಯಾಯಾಮದ ಜೊತೆಗೆ ಪ್ರತಿನಿತ್ಯ ಯೋಗವೂ ಅತ್ಯಗತ್ಯ ಎಷ್ಟೇ ಬ್ಯುಸಿ ಇದ್ದರೂ ಪ್ರತಿದಿನ ಯೋಗ ಮಾಡಿ ಅಂತ ನಟಿ ಸಲಹೆ ನೀಡುತ್ತಾರೆ.   

ವ್ಯಾಯಾಮ ಮತ್ತು ಯೋಗದ ಹೊರತಾಗಿ ಈಜು, ಟ್ರೆಕ್ಕಿಂಗ್ ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳನ್ನು ಇಷ್ಟಪಡುತ್ತೇನೆ. ಪ್ರತಿದಿನ ಈ ಕೆಲಸಗಳನ್ನು ಮಾಡುವುದರಿಂದ ದೇಹದಲ್ಲಿನ ಹೆಚ್ಚುವರಿ ಕ್ಯಾಲೋರಿಗಳು ಬೇಗನೆ ಕರಗುತ್ತವೆ.. ತೂಕ ಹೆಚ್ಚಾಗದಂತೆ ತಡೆಯುತ್ತವೆ.. ಇದೇ ನನ್ನ ಫಿಟ್ನೆಸ್ ಸೀಕ್ರೆಟ್ ಎಂದು ತ್ರಿಷಾ ಬಹಿರಂಗಪಡಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link