Trisha Krishnan : ವಿವಾಹಿತನೊಂದಿಗೆ ಪ್ರೀತಿ, ಖಾಸಗಿ ಫೋಟೋ ವೈರಲ್, ಮುರಿದ ನಿಶ್ಚಿತಾರ್ಥ..! ನಟಿ ತ್ರಿಶಾ ಎದರಿಸಿದ ಕಷ್ಟಗಳಿವು..
PAS 2 ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಅವರ ಸೌಂದರ್ಯ ಮತ್ತು ನಟನೆ ಕೆಲವೊಂದು ಸೀನ್‌ಗಳಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನೂ ಮುಚ್ಚಿಹಾಕಿತು ಅಂದ್ರೆ ತಪ್ಪಾಗಲ್ಲ. ಅಷ್ಟು ಕ್ಯೂಟ್ ಅಂಡ್ ಟ್ಯಾಲೆಟೆಂಡ್ ಈ ನಟಿ. ಸಧ್ಯ ಸೂಪರ್ ಸ್ಟಾರ್ ನಟಿಯಾಗಿರುವ ಮಿಂಚುತ್ತಿರು ತಿಶ್ರಾ ಹಲವಾರು ಅಡೆತಡೆಗಳನ್ನು ಎದುರಿಸಿ ಹಿಮ್ಮೆಟ್ಟಿಸಿ ಇಂದು ಈ ಸ್ಥಿತಿಗೆ ಬಂದು ತಲುಪಿದ್ದಾರೆ.
2005ರಲ್ಲಿ ತ್ರಿಷಾ ಮತ್ತು ದಳಪತಿ ವಿಜಯ್ ಸಂಬಂಧ ಸುದ್ದಿಯಾಗಿತ್ತು. ಗಿಲ್ಲಿ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಇಲ್ಲಿಂದಲೇ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ಆ ಸಮಯದಲ್ಲಿ ವಿಜಯ್‌ಗೆ ಮದುವೆಯಾಗಿತ್ತು. ಆದರೆ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದಾದ ನಂತರ ತ್ರಿಶಾ ಹೆಸರು ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆಗೂ ಸೇರಿಕೊಂಡಿತ್ತು. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಅಂತ ಹೇಳಲಾಗುತ್ತಿತ್ತು.
ತ್ರಿಷಾ ಮತ್ತು ರಾಣಾ ದಗ್ಗುಬಾಟಿ ಸಂಬಂಧದಲ್ಲಿದ್ದ ಸಮಯದಲ್ಲಿ, ಅವರಿಬ್ಬರ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದವು. ಈ ವಿವಾದದ ಬಗ್ಗೆ ತ್ರಿಶಾ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ರಾಣಾ ದಗ್ಗುಬಾಟಿ ಬಿಪಾಶಾ ಬಸು ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು, ಇದರಿಂದಾಗಿ ಅವರ ಸಂಬಂಧವು ಮುರಿದುಹೋಯಿತು ಎನ್ನಲಾಗಿದೆ.
ಸೌತ್ ಸೂಪರ್‌ಸ್ಟಾರ್ ಧನುಷ್‌ನೊಂದಿಗಿನ ತ್ರಿಷಾ ಸಂಬಂಧದ ಬಗ್ಗೆಯೂ ಹೆಚ್ಚು ಹೇಳಿ ಬಂದಿತ್ತು. ಆದರೆ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಅಂತ ಹೇಳಿಕೊಂಡಿದ್ದರು. 2015 ರಲ್ಲಿ, ನಟಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ನಿಶ್ಚಿತಾರ್ಥವಾದ ಕೇವಲ 5 ತಿಂಗಳಲ್ಲಿ ತ್ರಿಷಾ ಮತ್ತು ವರುಣ್ ಸಂಬಂಧ ಮುರಿದುಬಿತ್ತು. ಧನುಷ್ ಹಾಗೂ ತ್ರಿಷಾ ನಡುವಿನ ಸ್ನೇಹ ವರುಣ್ ಗೆ ಇಷ್ಟವಾಗಿರಲಿಲ್ಲ ಎನ್ನಲಾಗಿದೆ. ತ್ರಿಶಾ ಕೃಷ್ಣನ್ ಇದುವರೆಗೂ ಮದುವೆಯಾಗಿಲ್ಲ.