ಸ್ನೇಹಿತೆಯ ಪತಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು… ಆದ್ರೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಸಿದ್ಧ ನಟಿ!
ಬಾಲಿವುಡ್ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ನಟನೆಯಿಂದ ಜನಮನ ಗೆದ್ದಿದ್ದ ಶ್ರೀದೇವಿ ಹಿರಿತೆರೆಯಲ್ಲಿ ನಾನಾರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಇವೆಲ್ಲಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಪ್ರೇಮಜೀವನ.
ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ಶ್ರೀದೇವಿ, ಮಿಥುನ್ ಚಕ್ರವರ್ತಿ ಅವರನ್ನು ಪ್ರೀತಿಸುತ್ತಿದ್ದರು, ಆದರೆ ನಂತರ ಮಿಥುನ್ ಚಕ್ರವರ್ತಿಯನ್ನು ಬಿಟ್ಟು ಬೋನಿ ಕಪೂರ್ ಅವರ ಕೈ ಹಿಡಿದಿದ್ದರು ಈ ನಟಿ.
ಶ್ರೀದೇವಿಯವರು, ಮಿಥುನ್ ಚಕ್ರವರ್ತಿ ಜೊತೆ ಪ್ರೀತಿ ಸಂಬಂಧದಲ್ಲಿದ್ದಾಗ, ಬೋನಿ ಕಪೂರ್ ಅವರನ್ನು ತಮ್ಮ ಸಹೋದರ ಎಂದು ಪರಿಗಣಿಸಿದ್ದರಂತೆ. ಅಷ್ಟೇ ಅಲ್ಲದೆ, ಅವರ ಪತ್ನಿ ಮೋನಾ ಕಪೂರ್’ಗೆ ಉತ್ತಮ ಸ್ನೇಹಿತರಾಗಿದ್ದರು. ಸ್ನೇಹಿತೆಯೆಂದೇ, ಮೋನಾ ಕಪೂರ್ ಶ್ರೀದೇವಿಗೆ ಅವರ ಮನೆಯಲ್ಲಿ ಆಶ್ರಯ ನೀಡಿದ್ದರು.
ಆದರೆ ಮಿಥುನ್ ಚಕ್ರವರ್ತಿಗೆ ಶ್ರೀದೇವಿಯ ಮೇಲೆ ಅನುಮಾನ... ಶ್ರೀದೇವಿ ಬೋನಿ ಕಪೂರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಿಥುನ್ ಭಾವಿಸಿದ್ದರು. ಇದೇ ಕಾರಣಕ್ಕೆ ನಿಷ್ಠೆಯನ್ನು ಸಾಬೀತುಪಡಿಸಲು ಶ್ರೀದೇವಿ ಬೋನಿ ಕಪೂರ್‌ಗೆ ರಾಖಿ ಕಟ್ಟಿಸಿದ್ರು ಎಂದು ಮೋನಾ ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದರು ಅಂತ ಕೆಲ ಮಾಧ್ಯಮ ವರದಿಗಳು ಹೇಳುತ್ತವೆ.
ಮಿಥುನ್ ಹಾಗೂ ಶ್ರೀದೇವಿ ಜೊತೆಗಿನ ಅನೈತಿಕ ಸಂಬಂಧ ಅವರ ಪತ್ನಿ ಗೀತಾ ಬಾಲಿ ಅವರಿಗೆ ತಿಳಿದಾಗ ಅವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಆ ನಂತರ ಮಿಥುನ್ ಮತ್ತು ಶ್ರೀದೇವಿ ನಡುವೆ ಕ್ರಮೇಣ ಅಂತರ ಹೆಚ್ಚಾಗತೊಡಗಿತು.
ಒಂದೇ ಮನೆಯಲ್ಲಿ ವಾಸವಿದ್ದ ಕಾರಣ ಶ್ರೀದೇವಿ ಮತ್ತು ಬೋನಿ ಕಪೂರ್ ನಡುವೆ ಪ್ರೀತಿ ಅರಳಲು ಆರಂಭಿಸಿತ್ತು. ಸಂದರ್ಶನವೊಂದರಲ್ಲಿ, ಶ್ರೀದೇವಿ ಅವರು ಬೋನಿ ಕಪೂರ್ ಅವರನ್ನು ಹತ್ತಿರದಿಂದ ತಿಳಿದಾಗ, ನಾನು ಅವನನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದರು.
ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ, ಇವರಿಬ್ಬರ ಸಂಬಂಧವನ್ನು ಎಂದಿಗೂ ಅನುಮಾನಿಸಿರಲಿಲ್ಲ. ಬದಲಾಗಿ ಸಹೋದರ-ಸಹೋದರಿ ಎಂದೇ ಪರಿಗಣಿಸುತ್ತಿದ್ದರು, ಆದರೆ ಅಂತಿಮವಾಗಿ ಸತ್ಯ ಹೊರಬಂದಾಗ ಆಘಾತಕ್ಕೊಳಗಾದಳು. ಅಷ್ಟೇ ಅಲ್ಲದೆ, ಶ್ರೀದೇವಿ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು.
ಇದಾದ ನಂತರ ಬೋನಿ ಕಪೂರ್’ನಿಂದ ಮೋನಾ ದೂರವಾದರು. ಈ ಸಂದರ್ಭದಲ್ಲಿ ಶ್ರೀದೇವಿ ವಿರುದ್ಧ ಅಪವಾದಗಳ ಸುರಿಮಳೆಯೇ ಹರಿದಿತ್ತು. ಮನೆ ಒಡೆದವಳು ಎಂದೆಲ್ಲಾ ಆರೋಪಗಳು ಕೇಳಿಬಂದಿತ್ತು. ಆದರೆ ಇವೆಲ್ಲದರ ಮಧ್ಯೆ 1996 ರಲ್ಲಿ ಶ್ರೀದೇವಿಯನ್ನು ಬೋನಿ ಕಪೂರ್ ವಿವಾಹವಾದರು.