ಬಿಗ್ ಬಾಸ್’ನಿಂದ ಹೊರಬರುತ್ತಿದ್ದಂತೆ ಕಾರ್ತಿಕ್-ಸಂಗೀತಾ ಲವ್ ಸ್ಟೋರಿ ಬಗ್ಗೆ ಸತ್ಯ ರಿವೀಲ್ ಮಾಡಿದ ನೀತು!
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಭಾರೀ ಜನಮನ್ನಣೆ ಗಳಿಸಿದೆ. ಕಳೆದ ವಾರ ಅಂದರೆ ಡಿಸೆಂಬರ್ 3 ರಂದು ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಓರ್ವ ಸ್ಪರ್ಧಿ ಹೊರಗುಳಿಯಬೇಕಿತ್ತು. ಆದರೆ ಕಿಚ್ಚ ವಿಶೇಷ ಅಧಿಕಾರ ಬಳಸಿ, ಕಳೆದ ವಾರ ಯಾರನ್ನೂ ಮನೆಗೆ ಕಳುಹಿಸಿಲ್ಲ.
ಹಿಂದಿನ ವಾರ ಅಂದರೆ ನವೆಂಬರ್ 26-27ರಂದು ನಡೆದ ಎಲಿಮಿನೇಷನ್’ನಲ್ಲಿ ಕಡಿಮೆ ಓಟು ಪಡೆದ ನೀತು ವನಜಾಕ್ಷಿಯವರು ಮನೆಯಿಂದ ಹೊರಬಂದಿದ್ದರು
ಮನೆಯಿಂದ ಹೊರಬಂದ ನೀತು ಮಾಧ್ಯಮದ ಜೊತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.
ಸಂಭಾವನೆಯಾಗಿ ಜನರ ಪ್ರೀತಿ ಪಡೆದಿದ್ದೇನೆ ಎಂದು ಸಂತಸ ಹೊರಹಾಕಿದ್ದ ನೀತು, ಇದೀಗ ಕಾರ್ತಿಕ್ ಮತ್ತು ಸಂಗೀತಾ ನಡುವಿನ ಸಂಬಂಧಧ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
“ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಆಟವಾಗಲಿ ಎಲ್ಲದರಲ್ಲೂ ಅವನ ಸ್ಟ್ಯಾಂಡ್ ತಗೊತಾ ಇದ್ದಾನೆ. ಆದ್ರೆ ಸಂಗೀತಾ ನಮ್ಮನ್ನೆಲ್ಲಾ ಡಾಮಿನೆಟ್ ಮಾಡ್ತಿದ್ರು. ಸಂಗೀತಾಯಿಂದ ದೂರಾಗಿ ಕಾರ್ತಿಕ್’ಗೆ ಒಳ್ಳೆಯದಾಗಿದೆ. ಆದ್ರೆ ಈಗ ಸಂಗೀತಾಗೆ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.
“ಬೇಕು ಅಂದಾಗ ಬರೋದು ಬೇಡ ಅಂದಾಗ ಹೋಗೋದು ಇವೆಲ್ಲದರಿಂದ ಕಾರ್ತಿಕ್ ಇವಾಗ ಎಚ್ಚರವಾಗಬೇಕು. ಜೊತೆಗೆ ಸೇರಿದ್ರೂ ಕಾರ್ತಿಕ್ ಮತ್ತೆ ತಮ್ಮ ವೈಯಕ್ತಿಕ ಆಟ ಆಡ್ಬೇಕು. ಹೀಗೆ ಆಡಿದ್ರೆ ವಿನ್ನರ್ ಆಗೋ ಚಾನ್ಸಸ್ ಎಲ್ಲಾ ಇದೆ” ಅಂತಾ ಹೇಳಿದ್ದಾರೆ.