ಬಾಳೆಹಣ್ಣನ್ನು ಹೀಗೆ ಬಳಸಿದ್ರೆ ಹತ್ತೇ ನಿಮಿಷದಲ್ಲಿ ಕಡುಕಪ್ಪಾಗುತ್ತೆ ಕೂದಲು..! ಒಮ್ಮೆ ಟ್ರೈ ಮಾಡಿ
ಬಾಳೆಹಣ್ಣಿನಲ್ಲಿ ಕಂಡುಬರುವ ಅಂಶಗಳು ಕೂದಲಿನ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ.
ಅದರಲ್ಲೂ ಚೆನ್ನಾಗಿ ಮಾಗಿದ ಬಾಳೆಹಣ್ಣಿನ ಬಳಕೆಯಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಮೊದಲು ಒಂದು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ. ಇದರಲ್ಲಿ ಎರಡು ಸ್ಪೂನ್ ಗೋರಂಟಿ ಪುಡಿಯನ್ನು ಬೆರೆಸಿಡಿ.
ಗೋರಂಟಿಯೊಂದಿಗೆ ತಯಾರಿಸಿಟ್ಟ ಬನಾನ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ 10 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಬಿಳಿ ಕೂದಲಿಗೆ ಈ ರೀತಿ ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸುವುದರಿಂದ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಾಂತಿಯುತ ಕೂದಲೂ ಕೂಡ ನಿಮ್ಮದಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.