ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಫೇಶಿಯಲ್ ಯೋಗ ಪ್ರಯತ್ನಿಸಿ

Fri, 29 Jul 2022-10:30 am,

ಡಬಲ್ ಚಿನ್ ಸಮಸ್ಯೆಗೆ ಕೆಲವು ಮನೆಮದ್ದುಗಳ ಜೊತೆಗೆ ಮುಖ್ಯ ವ್ಯಾಯಾಮವೂ ಸಹಕಾರಿ ಆಗಿದೆ. ಫೇಶಿಯಲ್ ಯೋಗದ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

ಸಿಂಹ ಭಂಗಿ:  ಈ ಭಂಗಿಯಲ್ಲಿ ನಿಮ್ಮ ನಾಲಿಗೆಯನ್ನು ಪೂರ್ಣ ಬಲದಿಂದ ಹೊರತೆಗೆದು ಬಾಯಿಯಲ್ಲಿ ಗಾಳಿ ತುಂಬಿ ನಾಲಿಗೆಯನ್ನು ಬಲಕ್ಕೆ ಎಡಕ್ಕೆ ಸರಿಸಿ. ಹೀಗೆ ಮಾಡುವುದರಿಂದ ಮುಖದ ಹೆಚ್ಚುವರಿ ಕೊಬ್ಬು ಕರಗಿ,  ಮುಖದ ತ್ವಚೆ ಬಿಗಿಯಾಗುತ್ತದೆ.

ಬಲೂನ್ ಭಂಗಿ: ನಿಮ್ಮ ಬಾಯಿಯಲ್ಲಿ ಸಾಧ್ಯವಾದಷ್ಟು ಗಾಳಿಯನ್ನು ತುಂಬಿಸಿ. ನಂತರ, ತುಂಬಿದ ಗಾಳಿಯನ್ನು ಒಳಗೆ ಇಟ್ಟುಕೊಂಡು, ಬಾಯಿಯನ್ನು ಎಡ ಮತ್ತು ಬಲಕ್ಕೆ ಸರಿಸಿ. ದಿನಕ್ಕೆ 5 ರಿಂದ 7 ಬಾರಿ ಹೀಗೆ ಮಾಡಿದರೆ ಡಬಲ್ ಚಿನ್  ಸಮಸ್ಯೆಯಿಂದ ಪರಿಹಾರ ಪಡೆಯುವುದು ಮಾತ್ರವಲ್ಲ, ದವಡೆಯ ಮೂಳೆಗಳು ಸಹ ಗಟ್ಟಿಯಾಗುತ್ತವೆ.

ಮೀನಿನ ಭಂಗಿ: ಈ ರೀತಿಯ ಯೋಗದಲ್ಲಿ, ನೀವು ನಿಮ್ಮ ಕೆನ್ನೆಗಳನ್ನು ಒಳಕ್ಕೆ ಸೆಳೆಯಿರಿ ಮತ್ತು ತುಟಿಗಳಿಂದ ಮೀನಿನ ಆಕಾರವನ್ನು ಮಾಡಿ. ಇಂತಹ ಯೋಗವು ಮುಖದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವುದಲ್ಲದೆ, ಸ್ನಾಯುಗಳನ್ನು ಬಿಗಿಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ಸಹ ತೆಗೆದುಹಾಕಬಹುದು.

ಫೇಶಿಯಲ್ ಯೋಗ ಮಾಡಲು ಇನ್ನೂ ಹಲವು ಮಾರ್ಗಗಳಿವೆ. ಇವೆಲ್ಲವುಗಳ ಉದ್ದೇಶ ಮುಖದ ಚಲನೆಯನ್ನು ಹೆಚ್ಚಿಸುವುದು. ಈ ಕಾರಣದಿಂದಾಗಿ, ಮುಖದ ಚಟುವಟಿಕೆಗಳು ಹೆಚ್ಚಾಗುತ್ತವೆ ಮತ್ತು ಕ್ರಮೇಣ ಮುಖದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬು ಕರಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link