ದೇಹ ತೂಕ ಕಳೆದುಕೊಳ್ಳಲು ಈ ಬೇಳೆಯನ್ನು ಐದು ವಿಧಾನಗಳಲ್ಲಿ ಬಳಸಿ
ಹೆಸರು ಬೇಳೆ ದೋಸೆ ತೂಕ ನಷ್ಟಕ್ಕೆ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಆಯ್ಕೆಯಾಗಿದೆ. ಇದಕ್ಕಾಗಿ ಮೊದಲು ಹೆಸರು ಬೇಳೆಯನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಇದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮಸಾಲೆ ಮತ್ತು ಉಪ್ಪು ಸೇರಿಸಿ. ಇಷ್ಟಾದ ಮೇಲೆ ಈ ಹಿಟ್ಟಿನಿಂದ ದೋಸೆ ತಯಾರಿಸಿ.
ಹೆಸರು ಬೇಳೆ ಕಿಚಡಿ ತೂಕ ನಷ್ಟಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶ ಸಿಗುತ್ತದೆ. ತೂಕವನ್ನು ನಿಯಂತ್ರಿಸಲು ಕೂಡಾ ಇದು ಸಹಕಾರಿಯಾಗಿದೆ.
ಮೊಳಕೆ ಬಂದ ಹೆಸರು ಕಾಳು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಹೆಸರು ಬೇಳೆ ಸೂಪ್ ಸೇವಿಸಬಹುದು. ಇದು ರುಚಿಕರವಾಗಿರುವುದರ ಜೊತೆಗೆ, ಇದನ್ನು ಮಾಡುವುದು ತುಂಬಾ ಸುಲಭ. ಇದಕ್ಕಾಗಿ ನೆನೆಸಿದ ಹೆಸರು ಬೇಳೆಗೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಮಸಾಲೆ, ಇಂಗು ಮತ್ತು ಉಪ್ಪನ್ನು ಸೇರಿಸಿ ಕುದಿಸಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಕರಿಮೆಣಸು ಅಥವಾ ಕರಿಮೆಣಸು ಪುಡಿ ಸೇರಿಸಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಹೆಸರು ಬೇಳೆ ಇಡ್ಲಿಯನ್ನು ತಯಾರಿಸಿ ತಿನ್ನಬಹುದು. ಇದಕ್ಕಾಗಿ ನೆನೆಸಿದ ಹೆಸರು ಬೇಳೆಯನ್ನು ರುಬ್ಬಬೇಕು. ನಂತರ ನಿಮ್ಮ ಆಯ್ಕೆಯ ತರಕಾರಿಗಳು, ಮಸಾಲೆಗಳು ಮತ್ತು ಉಪ್ಪು ಸೇರಿಸಿ. ಈಗ ಈ ಹಿಟ್ಟಿನಿಂದ ಇಡ್ಲಿ ತಯಾರಿಸಿ. ಬೆಳಗಿನ ಉಪಾಹಾರಕ್ಕಾಗಿ ನೀವು ಮೂಂಗ್ ದಾಲ್ ಇಡ್ಲಿಯನ್ನು ತಿನ್ನಬಹುದು.