ಕೀಲು ನೋವಿನಿಂದ ಪರಿಹಾರ ಪಡೆಯಲು ಈ ಐದು ಆಯುರ್ವೇದ ತೈಲಗಳನ್ನು ಪ್ರಯತ್ನಿಸಿ
ಬಾದಾಮಿ ಎಣ್ಣೆ: ಬಾದಾಮಿಯನ್ನು ಮೆದುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಅಂತೆಯೇ ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ಈ ತೈಲದಿಂದ ಮಸಾಜ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ಬಾದಾಮಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಕೀಲುಗಳಿಗೆ ಮಸಾಜ್ ಮಾಡಿ.
ತೆಂಗಿನ ಎಣ್ಣೆ: ಪ್ರತಿ ಮನೆಯಲ್ಲಿಯೂ ತೆಂಗಎಣ್ಣೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇದನ್ನು ಕೊಬ್ಬರಿ ಎಣ್ಣೆ ಎಂದು ಕರೆಯಲಾಗುತ್ತದೆ. ಕೀಲು ನೋವಿನಿಂದ ಪರಿಹಾರವನ್ನು ಪಡೆಯಲು ಬಯಸುವವರಿಗೆ ಕೊಬ್ಬರಿ ಎಣ್ಣೆಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಎಣ್ಣೆಯು ಉರಿಯೂತದ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದ್ದು ಇದನ್ನು ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡುವುದರಿಂದ ಕೀಲು ನೋವಿನಿಂದ ಸುಲಭವಾಗಿ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸಾಸಿವೆ ಎಣ್ಣೆ: ಆಯುರ್ವೇದದ ಪ್ರಕಾರ, ಸಾಸಿವೆ ಎಣ್ಣೆ ಕೂಡ ಕೀಲು ನೋವಿಗೆ ಪರಿಹಾರ ನೀಡುತ್ತದೆ. ಕೀಲು ನೋವಿನ ಸಮಸ್ಯೆ ಇರುವವರು ಒಂದೆರಡು ಚಮಚ ಸಾಸಿವೆ ಎಣ್ಣೆಯೊಂದಿಗೆ ಒಂದೆರಡು ಎಸಳು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಅದು ಸ್ವಲ್ಪ ತಣ್ಣಗಾದ ಬಳಿಕ ಅದರಿಂದ ಮಸಾಜ್ ಮಾಡುವುದು ಅತ್ಯುತ್ತಮ ಪರಿಹಾರ ನೀಡುತ್ತದೆ ಎಂದು ಪರಿಗಣಿಸಲಾಗಿದೆ.
ಆಲಿವ್ ಎಣ್ಣೆ: ಆಯುರ್ವೇದದಲ್ಲಿ ಆಲಿವ್ ಆಯಿಲ್ ಅನ್ನು ಕೀಲು ನೋವಿಗೆ ಅತ್ಯುತ್ತಮ ಔಷಧ ಎಂದು ಪರಿಗಣಿಸಲಾಗಿದೆ. ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತಪರಿಚಲನೆ ಸರಾಗವಾಗಿ ನೋವಿನಿಂದಲೂ ಪರಿಹಾರ ದೊರೆಯುತ್ತದೆ ಎನ್ನಲಾಗುತ್ತದೆ.
ಎಳ್ಳೆಣ್ಣೆ: ಹೆಚ್ಚು ಮಾಯಿಶ್ಚರೈಸರ್ ಅನ್ನು ಹೊಂದಿರುವ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಕೀಲುಗಳಿಗೆ ಸಾಕಷ್ಟು ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.