Gum Bleeding: ಒಸಡುಗಳಲ್ಲಿ ರಕ್ತಸ್ರಾವವೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ
ಒಸಡುಗಳಲ್ಲಿ ರಕ್ತಸ್ರಾವವಾಗಲು ಹಲವು ಕಾರಣಗಳಿವೆ. ಆದರೆ, ಇದನ್ನು ನಿರ್ಲಕ್ಷಿಸಬಾರದು. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನೀವು ಒಸಡಿನ ರಕ್ತಸ್ರಾವದ ಸಮಸ್ಯೆಗೆ ತುಂಬಾ ಸುಲಭವಾಗಿ ಪರಿಹಾರವನ್ನು ಪಡೆಯಬಹುದು.
ಹಲ್ಲಿನ ಶುಚಿತ್ವದ ಬಗ್ಗೆ ಗಮನ ಹರಿಸದಿರುವುದು ಕೂಡ ಒಸಡುಗಳಲ್ಲಿ ರಕ್ತಸ್ರಾವಕ್ಕೆ ಪ್ರಮುಖ ಕಾರಣವಾಗಿರಬಹುದು. ಇದನ್ನು ತಪ್ಪಿಸಲು, ನಿತ್ಯ ಮುಂಜಾನೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮೊದಲು ತಪ್ಪದೇ ಬ್ರಶ್ ಮಾಡಿ.
ಕೇವಲ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ. ನೀವು ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ, ಹೈಡ್ರೋಜನ್ ಪೆರಾಕ್ಸೈಡ್ ಬಳಕೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಆದರೆ, ನೆನಪಿಡಿ, ನೀವು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಬಾಯಿಯನ್ನು ಸ್ವಚ್ಛಗೊಳಿಸುವಾಗ ಯಾವುದೇ ಕಾರಣಕ್ಕೂ ಸಹ ಅದನ್ನು ನುಂಗಬಾರದು.
ಧೂಮಪಾನ ಶ್ವಾಸಕೋಶಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದೇ ಇದೆ. ಆದರೆ, ಸಿಗರೇಟ್, ಬೀಡಿ, ಹುಕ್ಕಾ ಸೇದುವ ಚಟ ಇರುವವರಿಗೆ ಒಸಡಿನ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಇದನ್ನು ತಪ್ಪಿಸಲು ಈ ಕೆಟ್ಟ ಅಭ್ಯಾಸದಳಿಂದ ದೂರ ಇರುವುದು ಒಳ್ಳೆಯದು.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಬಹಳ ಮುಖ್ಯ. ನಿಮ್ಮ ಇಮ್ಯುನಿಟಿ ಚೆನ್ನಾಗಿದ್ದಾರೆ ಒಸಡುಗಳಲ್ಲಿ ರಕ್ತಸ್ರಾವವನ್ನೂ ಕೂಡ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.