Fatty Liver: ಈ `ಐದು` ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಹೇಳಿಗೆ ಗುಡ್ ಬೈ!
![ಫ್ಯಾಟಿ ಲಿವರ್ ಫ್ಯಾಟಿ ಲಿವರ್](https://kannada.cdn.zeenews.com/kannada/sites/default/files/2024/08/20/434916-fattylivertreatment.jpg?im=FitAndFill=(500,286))
ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಅತಿಯಾದ ಶೇಖರಣೆಯಿಂದ ಫ್ಯಾಟಿ ಲಿವರ್ /ಕೊಬ್ಬಿನ ಯಕೃತ್ ಸಮಸ್ಯೆಗೆ ಕಾರಣವಾಗುತ್ತದೆ.
![ಲಿವರ್ ಹಾನಿ ಲಿವರ್ ಹಾನಿ](https://kannada.cdn.zeenews.com/kannada/sites/default/files/2024/08/20/434915-fattylivertreatment-1.jpg?im=FitAndFill=(500,286))
ಫ್ಯಾಟಿ ಲಿವರ್ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ ಇದು ಯಕೃತ್ತಿನ ಹಾನಿಗೂ ಕಾರಣವಾಗಬಹುದು.
![ಫ್ಯಾಟಿ ಲಿವರ್ ಹೆಚ್ಚಾಗಲು ಕಾರಣ ಫ್ಯಾಟಿ ಲಿವರ್ ಹೆಚ್ಚಾಗಲು ಕಾರಣ](https://kannada.cdn.zeenews.com/kannada/sites/default/files/2024/08/20/434914-fattylivertreatment-2.jpg?im=FitAndFill=(500,286))
ಅತಿಯಾದ ಮದ್ಯಪಾನ, ಸ್ಥೂಲಕಾಯತೆ, ಅಧಿಕ ಕೊಲೆಸ್ಟ್ರಾಲ್ ಮತ್ತು ಟೈಪ್ 2 ಮಧುಮೇಹದಿಂದಾಗಿ ಕೊಬ್ಬಿನ ಯಕೃತ್ತಿ ಕಾಯಿಲೆ ಉಂಟಾಗಬಹುದು.
ಆದರೆ, ನೀವು ನಿಮ್ಮ ದಿನಚರಿಯಲ್ಲಿ ಐದು ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳ ಬಳಕೆಯಿಂದ ನೈಸರ್ಗಿಕವಾಗಿ ಫ್ಯಾಟಿ ಲಿವರ್ ಸಮಸ್ಯೆ ನಿವಾರಿಸಿ, ಯಕೃತ್ ಆರೋಗ್ಯವನ್ನೂ ಸುಧಾರಿಸಬಹುದು.
ಟೊಮೆಟೊ ಲೈಕೋಪೀನ್‌ನಿಂದ ತುಂಬಿದೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ಲಿವರ್ ಅನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಿ, ಯಕೃತ್ತಿನಲ್ಲಿ ಸಂಗ್ರಹವಾಗಿರುವ ಫ್ಯಾಟ್ ಕರಗಿಸಲು ಸಹಾಯಕವಾಗಿದೆ.
ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬೀಟ್ರೂಟ್ ಜ್ಯೂಸ್ ಆಕ್ಸಿಡೇಟಿವ್ ಒತ್ತಡ ಮತ್ತು ಯಕೃತ್ತಿನಲ್ಲಿ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ದಾಳಿಂಬೆಯಲ್ಲಿ ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ವಾರದಲ್ಲಿ ಒಂದೇ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಫ್ಯಾಟಿ ಲಿವರ್ ಸಮಸ್ಯೆಯನ್ನು ನೈಸರ್ಗಿಕವಾಗಿ ಪರಿಹರಿಸಬಹುದು.
ಕೆಂಪು ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಹೆರಳವಾಗಿದೆ. ಇದು ಉರಿಯೂತ ಮತ್ತು ಉತ್ಕರ್ಷಣ ನಿರೋಧಕಗಳಿಗೆ ಪ್ರಯೋಜನಕಾರಿ ಆಗಿದೆ. ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕೆಂಪು ದ್ರಾಕ್ಷಿ ಜ್ಯೂಸ್ ಸೇವನೆಯು ಯಕೃತ್ತಿನಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಸಹಾಯಕವಾಗಿದೆ.
ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ಎಂದರೆ ರೆಡ್ ಬೆಲ್ ಪೇಪರ್‌ಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸಲು, ಯಕೃತ್ತಿನ ಕಾರ್ಯವನ್ನು ಬೆಂಬಳಿಸಲು ಸಹಾಯಕಾರಿ. ಇದು ಸಹ ಫ್ಯಾಟಿ ಲಿವರ್ ಸಮಸ್ಯೆಗೆ ದಿವ್ಯೌಷಧವಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.