ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೇ? ಕಠಿಣ ಕೊಬ್ಬನ್ನೂ ಕರಗಿಸಬಲ್ಲ ಈ 5 ತರಕಾರಿಗಳನ್ನು ತಿಂದು ನೋಡಿ...
ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಹೊಟ್ಟೆ ಸುತ್ತಲೂ ಇರುವ ಕಠಿಣಾತಿ ಕಠಿಣ ಕೊಬ್ಬು ಕರಗಿಸುವುದು. ಆದರೆ, ಕೆಲವು ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಬಳಸುವುದರಿಂದ 'ಬೆಲ್ಲಿ ಫ್ಯಾಟ್' ಬೆಣ್ಣೆಯಂತೆ ಕರಗುತ್ತದೆ.
ಅಧ್ಯಯನಗಳ ಪ್ರಕಾರ, ಕೆಲವು ತರಕಾರಿಗಳ ಸೇವನೆಯಿಂದ ಡೊಳ್ಳು ಹೊಟ್ಟೆಯನ್ನು ಮಂಜಿನಂತೆ ಕರಗಿಸಬಹುದು. ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಬಲ್ಲ ತರಕಾರಿಗಳು ಯಾವುವು ಎಂದು ತಿಳಿಯೋಣ...
ಪಾಲಕ್ ಸೊಪ್ಪು ಸೇರಿದಂತೆ ಹಸಿರು ಎಲೆಗಳನ್ನು ಹೊಂದಿರುವ ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಇದು ಹೊಟ್ಟೆಯ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಸುಲಭವಾಗಿ ಸುಡುವಲ್ಲಿ ಪರಿಣಾಮಕಾರಿ ಆಗಿದೆ.
ಮಶ್ರೂಮ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೇಹವು ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಕರಿ ಆಗಿದೆ. ಇದರಲ್ಲಿರುವ ಪ್ರೊಟೀನ್ ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಕೆಗೆ ಕೊಡುಗೆ ನೀಡುತ್ತದೆ.
ಫೈಟೋಕೆಮಿಕಲ್ ಗಳಲ್ಲಿ ಸಮೃದ್ಧವಾಗಿರುವ ಬ್ರೊಕೊಲಿ ನಿಮ್ಮ ಆಹಾರದಲ್ಲಿದ್ದಾರೆ ಇದು ದೇಹದಲ್ಲಿ ಶೇಖರವಾಗಿರುವ ಕಠಿಣ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.
ಮೆಣಸಿನಕಾಯಿ ಸೇವನೆಯಿಂದ ಉತ್ಪತ್ತಿಯಾಗುವ ಶಾಖವು ಎಷ್ಟೇ ಕ್ಲಿಷ್ಟದ ಕೊಬ್ಬನ್ನಾದರೂ ಸುಲಭವಾಗಿ ಕರಗಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ಸಿಹಿ ಕುಂಬಳಕಾಯಿಯು ಕಡಿಮೆ ಕ್ಯಾಲೋರಿ ಹಾಗೂ ಅಧಿಕ ಫೈಬರ್ ಹೊಂದಿರುವ ತರಕಾರಿ. ಇದರ ನಿಯಮಿತ ಸೇವನೆಯು ತೂಕ ನಷ್ಟದ ಜೊತೆಗೆ ಹೊಟ್ಟೆ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.