ಹಿತ್ತಲ ತುಂಬಾ ಸಿಗುವ ಈ ಹೂವೇ ಸಾಕು ಬ್ಲಡ್ ಶುಗರ್ ನಾರ್ಮಲ್ ಮಾಡಲು ! ಇದನ್ನು ಸೇವಿಸಿದರೆ ಮತ್ಯಾವತ್ತೂ ಕಾಡದು ಮಧುಮೇಹ ! ಒಮ್ಮೆ ಟ್ರೈ ಮಾಡಿ ನೋಡಿ
ರಕ್ತದಲ್ಲಿ ಗ್ಲುಕೋಸ್ ಮಟ್ಟ ಜಾಸ್ತಿಯಾದಾಗ ಅದನ್ನು ಮಧುಮೇಹ ಎಂದು ಕರೆಯುತ್ತಾರೆ. ಒಮ್ಮೆ ಮಧುಮೇಹ ನಿಮ್ಮನ್ನು ಬಾಧಿಸಿತು ಎಂದಾದರೆ ಮತ್ತದು ಜೀವನ ಪರ್ಯಂತ ನಿಮ್ಮ ಜೊತೆಗಿರುತ್ತದೆ.
ಮಧುಮೇಹಕ್ಕೆ ಶಾಶ್ವತ ಪರಿಹಾರ ಅಥವಾ ಡಯಾಬಿಟೀಸ್ ಅನ್ನು ಗುಣಪಡಿಸುವ ಔಷಧಿ ಇನ್ನೂ ಪತ್ತೆ ಹಚ್ಚಿಲ್ಲ. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ.
ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರಬೇಕಾದರೆ ನಿತ್ಯ ಮಾತ್ರೆ ಸೇವಿಸಲೇ ಬೇಕು. ಆದರೆ ಇದರ ಬದಲಿಗೆ ಕೆಲವು ನೈಸರ್ಗಿಕ ಮನೆ ಮದ್ದು ಅಳವಡಿಸುವ ಮೂಲಕ ಕೂಡಾ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಮನೆ ಮದ್ದನ್ನು ಸೇವಿಸುವ ಮೂಲಕ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದೆ ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುವುದು ಸಾಧ್ಯವಾಗುತ್ತದೆ.
ಸದಾ ಪುಷ್ಟ ಬಹುತೇಕ ಎಲ್ಲರ ಮನೆಯ ಮುಂದೆ ಕಂಡು ಬರುವ ಗಿಡ. ಇದು ಮಧುಮೇಹ ರೋಗಿಗಳಿಗೆ ಸಂಜೀವಿನಿ ಎಂದರೆ ಸುಳ್ಳಲ್ಲ. ಈ ಗಿಡದ ಎಲೆ ಅಂಟ್ಟು ಹೂವು ಎರಡೂ ಬ್ಲಡ್ ಶುಗರ್ ಗೆ ರಾಮಬಾಣ.
ಈ ಹೂವು ಮೇದೋಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಕ್ರಿಯಾಶೀಲವಾಗಿಸುತ್ತವೆ. ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇನ್ಸುಲಿನ್ ಹಾರ್ಮೋನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಅಥವಾ ಅದನ್ನು ಸರಿಯಾದ ಪ್ರಮಾಣದಲ್ಲಿ ದೇಹ ಉಪಯೋಗಿಸುವುದು ಸಾಧ್ಯವಾದರೆ ಬ್ಲಡ್ ಶುಗರ್ ನಾರ್ಮಲ್
1 ರಿಂದ 2 ಕಪ್ ನೀರು ತೆಗೆದುಕೊಂಡು ಅದರಲ್ಲಿ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ನಿತ್ಯ ಮುಂಜಾನೆ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದರಲ್ಲಿ ಸಂದೇಹವೇ ಬೇಡ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ