Back Pain Remedies: ನಿತ್ಯ ಈ 5 ಕೆಲಸ ಮಾಡುವುದರಿಂದ ಬೆನ್ನು ನೋವಿಗೆ ಸಿಗುತ್ತೆ ಶಾಶ್ವತ ಪರಿಹಾರ
ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವಿನ ಸಮಸ್ಯೆ ಬಾಧಿಸುವುದು ಸರ್ವೇ ಸಾಮಾನ್ಯ. ಇದಲ್ಲದೆ ಬೆನ್ನು ನೋವಿಗೆ ಇನ್ನೂ ಕೆಲವು ಕಾರಣಗಳಿವೆ. ಕಾರಣ ಏನೇ ಇರಲಿ. ನಿಮ್ಮ ನಿತ್ಯ ಜೀವನದಲ್ಲಿ ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಬೆನ್ನು ನೋವಿಗೆ ಶಾಶ್ವತ ಪರಿಹಾರ ಪಡೆಯಬಹುದು.
ದೀರ್ಘ ಸಮಯ ಕುಳಿದುಕೊಳ್ಳುವುದರಿಂದ ಬ್ರೇಕ್: ದೀರ್ಘ ಸಮಯ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಅವುಗಳಲ್ಲಿ ಬೆನ್ನು ನೋವಿನ ಸಮಸ್ಯೆ ಕೂಡ ಒಂದು. ಇದನ್ನು ತಪ್ಪಿಸಲು ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳುವುದನ್ನು ಪರಿಗಣಿಸಿ.
ದೈನಂದಿನ ತೈಲ ಮಸಾಜ್: ನಿಮಗೆ ತೀವ್ರವಾದ ಬೆನ್ನು ನೋವು ಇದ್ದರೆ, ನೀವು ಪ್ರತಿದಿನ ಎಣ್ಣೆ ಮಸಾಜ್ ಮಾಡುವುದು ಬಹಳ ಮುಖ್ಯ. ಎಣ್ಣೆ ಮಸಾಜ್‌ನಿಂದ ನಿಮ್ಮ ಬೆನ್ನು ನೋವಿಗೆ ಪರಿಹಾರ ದೊರೆಯುತ್ತದೆ.
ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡಿ: ಬೆಳ್ಳುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ ಮತ್ತು ಅದು ಉಗುರುಬೆಚ್ಚಗಾದ ನಂತರ ಅದರಲ್ಲಿ ಎಣ್ಣೆಯನು ಬೆರೆಸಿ ಮಸಾಜ್ ಮಾಡಿ. ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೀವು ನೋವಿನಿಂದ ಸಾಕಷ್ಟು ಪರಿಹಾರವನ್ನು ಪಡೆಯುತ್ತೀರಿ.
ಕುಳಿತುಕೊಳ್ಳಲು ಸರಿಯಾದ ಸ್ಥಳ: ಬೆನ್ನು ನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಲು ನೀವು ಕುಳಿತುಕೊಳ್ಳುವ ಸ್ಥಳದ ಬಗ್ಗೆ ಸರಿಯಾಗಿ ನಿಗಾವಹಿಸುವುದು ಮುಖ್ಯ. ಸರಿಯಾಗಿ ಕುಳಿತುಕೊಳ್ಳುವುದರಿಂದ ಬೆನ್ನು ಆಯಾಸ ಕಡಿಮೆಯಾಗುತ್ತದೆ. ಕುಳಿತುಕೊಳ್ಳುವಾಗ ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳುವುದನ್ನು ಪರಿಗಣಿಸಿ.
ಯೋಗಾಸನ: ಯಾವಾಗಲೂ ಫಿಟ್ ಆಗಿರಲು ಪ್ರತಿದಿನ ಯೋಗ ಮಾಡುವುದು ಬಹಳ ಮುಖ್ಯ. ದೈಹಿಕವಾಗಿ ಸದೃಢವಾಗಿರಲು ಸಹ ಯೋಗ ಮಾಡಲೇಬೇಕು. ಪ್ರತಿದಿನ ನೀವು ಯೋಗಾಸನ ಮಾಡುವುದರಿಂದ ಬೆನ್ನು ನೋವಿಗೆ ಶಾಶ್ವತ ಪರಿಹಾರ ಪಡೆಯಬಹುದು. ಆದರೆ, ನೆನಪಿಡಿ ನೀವು ಅತಿಯಾದ ಬೆನ್ನು ನೋವಿನಿಂದ ಬಳಲುತ್ತಿದ್ದರೆ ತಜ್ಞರ ಸಲಹೆ ಮೇರೆಗೆ ಅವರು ಸೂಚಿಸಿದ ಯೋಗಾಸನವನ್ನಷ್ಟೇ ಮಾಡುವುದು ಒಳ್ಳೆಯದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.