ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿಯೇ ತಯಾರಿಸಿ ಆರ್ಗ್ಯಾನಿಕ್ ಹೇರ್ ಡೈ..!
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಹೇರ್ ಡೈಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಅಮೋನಿಯಾ ಬಳಸುವುದರಿಂದ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.
ಆದರೆ, ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಬಹುದು.
ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ: * ಮೆಂತ್ಯ ಪುಡಿ * ಕರಿಬೇವಿನ ಪುಡಿ * ಹರಳೆಣ್ಣೆ * ತೆಂಗಿನೆಣ್ಣೆ
ಈ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಬಟ್ಟಳಿಗೆ 2 ಚಮಚ ಹರಳೆಣ್ಣೆ ಹಾಕಿ, ಬಳಿಕ ಅಷ್ಟೇ ಪ್ರಮಾಣದ ತೆಂಗಿನೆಣ್ಣೆ ಹಾಕಿ ಬಳಿಕ ಒಂದೊಂದು ಚಮಚ ಮೆಂತ್ಯ ಪುಡಿ ಹಾಗೂ ಕರಿಬೇವಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಎರಡು ಗಂಟೆಗಳವರೆಗೆ ಹಾಗೆ ಬಿಡಿ.
ಈ ರೀತಿಯಾಗಿ ಮನೆಯಲ್ಲಿಯೇ ತಯಾರಿಸಿರುವ ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹೇರ್ ಪ್ಯಾಕ್ ರೀತಿ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ಒಂದೆರಡು ಗಂಟೆಗಳ ಕಾಲ ಹೇರ್ ಡೈ ಅನ್ನು ಹಾಗೆ ಬಿಡಿ.
ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿಗೆ ಲೇಪಿಸಿದ ಎರಡು ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
ಹೀಗೆ ಮನೆಯಲ್ಲಿಯೇ ತಯಾರಿಸಿದ ಆರ್ಗ್ಯಾನಿಕ್ ಹೇರ್ ಡೈ ಅನ್ನು ವಾರದಲ್ಲಿ ಎರಡು ಬಾರಿ ಬಳಸುತ್ತಾ ಬಂದರೆ ಒಂದೂ ಬಿಳಿ ಕೂದಲಿಲ್ಲದಂತೆ ಕೂದಲನ್ನು ಕಪ್ಪಾಗಿಸಬಹುದು. ಜೊತೆಗೆ ಉದ್ದ ದಟ್ಟವಾದ ಕೂದಲನ್ನೂ ನಿಮ್ಮದಾಗಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.