ಈ ಪುಟ್ಟ ಕಾಳನ್ನು ಬಳಸಿ ಎರಡೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತೆ...!
ಬಿಳಿ ಕೂದಲನ್ನು ಕಪ್ಪಾಗಿಸಲು ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿರುವ ಒಂದು ವಸ್ತು ತುಂಬಾ ಲಾಭದಾಯಕವಾಗಿದೆ.
ಸಾಸಿವೆಯನ್ನು ಬಳಸಿ ಎರಡೇ ಎರಡು ನಿಮಿಷದಲ್ಲಿ ಬಿಳಿ ಕೂದಲನ್ನು ತ್ವರಿತವಾಗಿ ಕಪ್ಪಾಗಿಸಬಹುದು.
ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಸಾಸಿವೆಯನ್ನು ತೆಗೆದುಕೊಂಡು ಇದಕ್ಕೆ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಹಾಕಿ ಕರಿಬೇವು ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಇದನ್ನು ನುಣುಪಾಗಿ ಪುಡಿಮಾಡಿ. ಇದನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿ ಇಡಿ.
ನೀವು ಬಿಳಿ ಕೂದಲನ್ನು ತ್ವರಿತವಾಗಿ ಕಪ್ಪಾಗಿಸಲು ನೀವು ಈಗಾಗಲೇ ರೆಡಿ ಮಾಡಿಟ್ಟಿರುವ ಸಾಸಿವೆ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ. ಇದಕ್ಕೆ ಒಂದು ಸ್ಪೂನ್ ಅಲೋವೆರಾ ಮತ್ತು ಅಷ್ಟೇ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ.
ನೀವು ಈ ಮಿಶ್ರಣವನ್ನು ಕೂದಲಿಗೆ ಹಚ್ಚಿದ ಬಳಿಕ ಬೇಕೆಂದರೆ ಹಾಗೆ ಬಿಡಬಹುದು. ಇಲ್ಲವೇ, ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಬಹುದು. ಇದರಿಂದ ಕೂದಲು ತಕ್ಷಣವೇ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.