ಮಹಿಳೆಯರೇ ಸಿಹಿಸುದ್ದಿ: ಇನ್ಮುಂದೆ 2000 ಅಲ್ಲ... ಪ್ರತಿ ತಿಂಗಳು ಖಾತೆ ಸೇರಲಿದೆ 2,500 ರೂ ಮತ್ತು 10 ಗ್ರಾಂ ಬಂಗಾರ! ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ
ಕರ್ನಾಟಕ ರಾಜ್ಯ ಸರ್ಕಾರ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2000 ನೀಡುವ ಯೋಜನೆಗಳು ಜಾರಿಗೆ ತಂದಿದೆ. ಆದರೆ ಇದೀಗ ರೂ. 2500 ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸುದ್ದಿ ನಿಜವೇ? ಇದರ ಹಿನ್ನೆಲೆ ಏನೆಂಬುದನ್ನು ಮುಂದೆ ತಿಳಿಯೋಣ.
ಅಂದಹಾಗೆ ಈ ಸುದ್ದಿ ನಿಜ. ಆದರೆ ಕರ್ನಾಟಕದಲ್ಲಿ ಅಲ್ಲ, ಬದಲಾಗಿ ತೆಲಂಗಾಣದಲ್ಲಿ. ಅಲ್ಲಿನ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಮಹಿಳೆಯರಿಗೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮಹಿಳೆಯರಿಗೆ ಉಚಿತ ಬಸ್ ಯೋಜನೆಗೆ ಚಾಲನೆ ನೀಡಿದ್ದರು.
ಆ ನಂತರ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ವಿದ್ಯುತ್ ಯೋಜನೆಗಳಿಗೆ ರೇವಂತ್ ರೆಡ್ಡಿ ಸರ್ಕಾರ ಅನುಮೋದನೆ ನೀಡಿತು. ಇದಲ್ಲದೆ, ಮಹಿಳೆಯರಿಗಾಗಿ ಮತ್ತೊಂದು ಪ್ರಮುಖ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರವು ಒಳ್ಳೆಯ ಸುದ್ದಿಯನ್ನು ನೀಡಿದೆ. ಮಾಸಿಕ 2,500 ರೂ.ಗಳ ಮಹಾಲಕ್ಷ್ಮಿ ಯೋಜನೆ ಕುರಿತು ಪ್ರಮುಖ ಘೋಷಣೆ ಮಾಡಿದ್ದು, ಮಹಿಳೆಯರು ಇದಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಹೊಸ ವರ್ಷದಲ್ಲಿ ಕಲ್ಯಾಣ ಲಕ್ಷ್ಮಿ ಯೋಜನೆ ಮೂಲಕ ಅರ್ಹ ಮಹಿಳೆಯರಿಗೆ ಮಾಸಿಕ 2,500 ರೂ. ಮತ್ತು 10 ಗ್ರಾಂ ಬಂಗಾರ ನೀಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಗದ್ದಂ ಪ್ರಸಾದ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸಚಿವರ ಉಪ ಸಮಿತಿ ವರದಿ ಬಂದ ನಂತರ ರೈತರಿಗೆ ಭರವಸೆ ನೀಡಲಾಗುವುದು ಎಂದಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ಡಿಸೆಂಬರ್ 9ರೊಳಗೆ ಸರಪಂಚ್‌ಗಳ ಬಾಕಿ ಬಿಲ್ ಪಾವತಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಗುರುವಾರ ವಿಕಾರಾಬಾದ್ ಜಿಲ್ಲೆಯ ಧಾರೂರಿನಲ್ಲಿ 2.01 ಕೋಟಿ ನಬಾರ್ಡ್ ನಿಧಿಯಲ್ಲಿ ನಿರ್ಮಿಸಿರುವ ಅಕ್ಕಿ ಗಿರಣಿ, ಗೋದಾಮು, ಧಾನ್ಯ ಖರೀದಿ ಕೇಂದ್ರ ಮತ್ತು ನೀರಿನ ಘಟಕವನ್ನು ಸ್ಪೀಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ನಡುವೆಯೂ ಕಲ್ಯಾಣ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಬಿಆರ್‌ಎಸ್ ಸಾವಿರಾರು ಕೋಟಿ ಸಾಲ ಮಾಡಿ ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದೆ ಎಂದು ಟೀಕಿಸಿದರು. ಹಿಂದಿನ ಸರ್ಕಾರದಲ್ಲಿ ತೆಲಂಗಾಣದ ಆರ್ಥಿಕತೆ ಛಿದ್ರವಾಗಿತ್ತು ಎಂದು ಸ್ಪೀಕರ್ ವಾಗ್ದಾಳಿ ನಡೆಸಿದರು. ಆ ಸಾಲಗಳಿಗೆ ಕಾಂಗ್ರೆಸ್ ಸರ್ಕಾರ ಇದುವರೆಗೆ ರೂ.58 ಸಾವಿರ ಕೋಟಿ ಮಿತಿಯನ್ನು ಪಾವತಿಸಿದೆ ಎಂದು ಹೇಳಿದರು.
ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ಹೈದರಾಬಾದ್‌ನ ಐಮ್ಯಾಕ್ಸ್ ಥಿಯೇಟರ್ ಪಕ್ಕದಲ್ಲಿರುವ ನೆಕ್ಲೇಸ್ ರಸ್ತೆಯಲ್ಲಿರುವ ಎಚ್‌ಎಂಡಿಎ ಮೈದಾನದಲ್ಲಿ ನಾಲ್ಕು ದಿನಗಳ ಮೀನು ಆಹಾರ ಉತ್ಸವವನ್ನು ಸ್ಪೀಕರ್ ಉದ್ಘಾಟಿಸಿದರು.