Tukali Santhosh : ಬಿಗ್ ಬಾಸ್ ತುಕಾಲಿ ಸಂತೋಷ್​ ಕಾರು ಅಪಘಾತ.!

Thu, 14 Mar 2024-10:03 am,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್‌ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದರು. ಇದೇ ಕಾರಿನಲ್ಲಿ ತಮ್ಮ ಪತ್ನಿಯೊಂದಿಗೆ ಹೊಳೆನರಸೀಪುರಕ್ಕೆ ತುಕಾಲಿ ಸಂತೋಷ್ ತೆರಳುತ್ತಿದ್ದರು.

ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತುಕಾಲಿ ಸಂತು ಹೋಗುತ್ತಿದ್ದರು. ಈ ವೇಳೆ ಕುಣಿಗಲ್‌ ಬಳಿ ತುಕಾಲಿ ಸಂತು ಕಾರಿನ ಬಲಗಡೆಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾನೆ. 

ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಭಾಗಶಃ ಜಖಂ ಗೊಂಡಿದೆ. ಕುಣಿಗಲ್ ನಿಂದ ಕುರುಡಿಹಳ್ಳಿ ಗೆ ಬರುತ್ತಿದ್ದ ಆಟೋ ತುಕಾಲಿ ಸಂತೋಷ್‌ ಅವರ ಕಾರಿಗೆ ಗುದ್ದಿದೆ. 

ಈ ಸಮಯದಲ್ಲಿ ಆಟೋ ಚಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ, ನೋವು ಸಂಭವಿಸಿಲ್ಲ. 

ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತುಕಾಲಿ ಸಂತೋಷ್ ಕಾರು ಹಾಗೂ ಆಟೋವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link