BBK10 Finale: ಬಿಗ್ ಬಾಸ್ ಫಿನಾಲೆಗೆ ಮತ್ತೊಬ್ಬ ಸ್ಪರ್ಧಿ ಎಂಟ್ರಿ.. ಟಾಪ್ 5 ನಲ್ಲಿ ಸ್ಥಾನ ಫಿಕ್ಸ್!

Tue, 16 Jan 2024-11:36 pm,

ಬಿಗ್‌ ಬಾಸ್‌ ನೀಡಿದ್ದ ಟಾಸ್ಕ್‌ ಗೆದ್ದು, ಮನೆಯವರ ವೋಟ್‌ ಮೂಲಕ ಸಂಗೀತಾ ಶೃಂಗೇರಿ ಕಳೆದ ವಾರ ಫಿನಾಲೆಗೆ ಟಿಕೆಟ್‌ ಪಡೆದಿದ್ದರು. 

ಬಿಗ್‌ ಬಾಸ್‌ ಮನೆಯಲ್ಲಿ ಮಂಗಳವಾರ ಅಚ್ಚರಿಯ ನಾಮಿನೇಷನ್‌ ನಡೆದಿದೆ. ಈ ನಾಮಿನೇಷನ್‌ ನಿಂದ ಬಚಾವ್‌ ಆದ ಸ್ಪರ್ಧಿಯೊಬ್ಬರು ಫಿನಾಲೆ ತಲುಪಿದ್ದಾರೆ.

ಬಿಗ್‌ ಬಾಸ್‌ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಮನೆಯಲ್ಲಿ 8 ಜನರಿದ್ದು 6 ಜನರು ನಾಮಿನೇಟ್‌ ಆಗಿದ್ದಾರೆ. 

ಸಂಗೀತಾ ಮನೆಯ ಕ್ಯಾಪ್ಟನ್‌ ಆಗಿದ್ದು, ಅವರನ್ನು ಈ ನಾಮಿನೇಷನ್‌ ಪ್ರಕ್ರಿಯೆಗೆ ಒಳಪಡಿಸಿರಲಿಲ್ಲ. 

ಬಿಗ್‌ ಬಾಸ್‌ ಮನೆಯ ಸದಸ್ಯರ ವೋಟಿಂಗ್‌ ಅನುಸಾರ ಪ್ರತಾಪ್‌, ವರ್ತೂರು ಸಂತೋಷ್‌, ತನಿಷಾ, ವಿನಯ್‌, ನಮ್ರತಾ, ಕಾರ್ತಿಕ್ ನಾಮಿನೇಟ್‌ ಆಗಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕೊನೆಯ ನಾಮಿನೇಷನ್‌ ನಿಂದ ತುಕಾಲಿ ಸಂತೋಷ್‌ ಬಚಾವ್‌ ಆಗಿದ್ದಾರೆ. 

ತುಕಾಲಿ ಸಂತೋಷ್‌ ಈ ವಾರ ನಾಮಿನೇಟ್‌ ಆಗದೇ, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಟಾಪ್‌ 5 ಕಂಟೆಸ್ಟಂಟ್‌ನಲ್ಲಿ ಒಬ್ಬರಾಗಲಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link