BBK 11: ಬಿಗ್ ಬಾಸ್ ಮನೆಯಲ್ಲಿ ಪತ್ನಿ ಜೊತೆ ಮಲಗಲು ಅವಕಾಶ ಕೇಳಿದ ಸ್ಪರ್ಧಿಯ ಪತಿ !
ಬಿಗ್ ಬಾಸ್ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ಸುದೀಪ್ ಸಾರಥ್ಯದಲ್ಲಿ ಶೋ ನಡೆಯುತ್ತಿದ್ದು, 17 ಜನ ಸ್ಪರ್ಧಿಗಳು ಮನೆ ಸೇರಿದ್ದಾಗಿದೆ.
ಕನ್ನಡ ಬಿಗ್ ಬಾಸ್ 11 ರ ಸ್ಪರ್ಧಿಯಾಗಿ ಮಾನಸ ಸಂತು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ತುಕಾಲಿ ಸಂತೋಷ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸುದೀಪ್ ಅವರು ತುಕಾಲಿ ಸಂತು ಜೊತೆ ಮುಂದಿನ ಸೀಸನ್‌ಗೆ ಯಾರನ್ನ ಕಳಿಸುವಿರಿ ಎಂದಾಗ ತುಕಾಲಿ ಕೊಟ್ಟ ಉತ್ತರ ಕೇಳಿ ಕಿಚ್ಚ ಕೂಡ ಶಾಕ್ ಆಗಿದ್ದಾರೆ.
ಮುಂದಿನ ಸೀಸನ್‌ಗೆ ನಾನು ನನ್ನ ಹೆಂಡ್ತಿ ಇಬ್ಬರನ್ನೂ ಕಳಿಸಿ. ಎಲ್ಲ ಕಡೆ ನನ್ನ ಹೆಂಡಿ ಜೊತೆಗೆ ಮಲಗಿದ್ದೀನಿ. ಒಮ್ಮೆ ಬಿಗ್ ಬಾಸ್ ಮನೆಯೊಳಗೂ ಮಲಗುವ ಆಸೆ ಎಂದು ತುಕಾಲಿ ಸಂತು ಹೇಳಿದ್ದಾರೆ.
ಇದನ್ನು ಕೇಳಿದ ತಕ್ಷಣ ಕಿಚ್ಚ ಸುದೀಪ್ ದಂಗಾದರು. ವೇದಿಕ ಬಳಿ ಇದ್ದವರೆಲ್ಲ ಜೋರಾಗಿ ನಗಲು ಆರಂಭಿಸಿದರು.
ಆಗ ತುಕಾಲಿ ತಮ್ಮ ಮಾತಿಗೆ ಸ್ಪಷ್ಟನೆ ನೀಡುತ್ತ, ನಾನು ಹೇಳಿದ್ದು ಆ ಥರ ಅಲ್ಲ. ಒಂದೇ ಕಡೆ ಮಲಗೋದು ಎಂದು ಹೇಳಿದ್ದಾರೆ.
ತುಕಾಲಿ ಸಂತು ಅವರ ಈ ಮಾತುಗಳ ಉದ್ದೇಶ ಕೇವಲ ಜನರನ್ನು ನಗಿಸುವುದಾಗಿತ್ತು.
ಗಿಚ್ಚಿ ಗಿಲಿ ಗಿಲಿ ಮೂಲಕ ಖ್ಯಾತಿ ಪಡೆದ ತುಕಾಲಿ ಸಂತೋಷ್ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದರು. ಟಾಪ್ 6 ಕಂಟೆಸ್ಟಂಟ್‌ಗಳಲ್ಲಿ ತುಕಾಲಿ ಸಂತು ಸಹ ಒಬ್ಬರು.